Wednesday, January 22, 2025
ಸುದ್ದಿ

ಭಾರತೀಯ ಸಂಸ್ಕøತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸಲು ಮಾತೃಭಾಷೆ ಶಿಕ್ಷಣವೇ ಅಗತ್ಯ- ಕಹಳೆ ನ್ಯೂಸ್

ಸರಸ್ವತೀ ವಿದ್ಯಾಲಯ ಕಡಬ ಇಲ್ಲಿನ ಭಾರತಿ ಶಿಶುಮಂದಿರದ ನೂತನ ಕುಟೀರ ಸುದರ್ಶನದ ಲೋಕಾರ್ಪಣೆಗೈದು ಆಶಿರ್ವಚನ ನೀಡಿದ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ದೇವಾಲಯ ಮತ್ತು ವಿದ್ಯಾಲಯ ಒಂದು ಊರಿನಲ್ಲಿದ್ದರೇ ಆ ಊರು ಸುಭೀಕ್ಷವಾಗಿರುತ್ತದೆ. ನಮ್ಮ ದೇಶದ ಜ್ಞಾನ, ಅರಿವಿನಲ್ಲಿ ಸಂಸ್ಕಾರ, ಸಂಸ್ಕøತಿ ಇದೆ. 

ಭಾರತೀಯ ಸಂಸ್ಕøತಿ ಮತ್ತು ಪರಂಪರೆ ಉಳಿಯಬೇಕಾದರೆ ಮಾತೃಭಾಷೆಯಲ್ಲಿ ಶಿಕ್ಷಣ ನೀಡುವ ಅಗತ್ಯವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಭಾರತೀಯ ಸನಾತನ ಸಂಸ್ಕøತಿ, ಆಚಾರ ವಿಚಾರಗಳನ್ನು ಹೊರದೇಶಗಳೇ ಅನುಸರಿಸುತ್ತಿರುವಾಗ ಭಾರತದ ನಮ್ಮತನವನ್ನು ಈ ಮಣ್ಣಿನ ಮಕ್ಕಳಿಗೆ ನೀಡುವ ಜವಬ್ಧಾರಿ ನಮ್ಮೇಲ್ಲರ ಮೇಲಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಭಾಸ್ಕರ್ ಪೈ ವೇಣೂರು, ಯಜ್ಞೇಶ್ ಆಚಾರ್, ವಿಕಾಸ್ ಜೈನ್, ರವಿರಾಜ್ ಶೆಟ್ಟಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಂಸ್ಥೆಯ ಸಂಚಲಕರಾದ ವೆಂಕಟ್ರಮಣ ರಾವ್ ಪ್ರಾಸ್ತವಿಕ ಮಾತುಗಳನ್ನಾಡಿ, ಗಿರೀಶ್ ಎ.ಪಿ ಸ್ವಾಗತಿಸಿ, ದಯನಂದ ಪುರಿಯ ವಂದನಾರ್ಪಣೆಗೈದರು. ಅಪರ್ಣ ರಾವ್ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು