Wednesday, January 22, 2025
ಸುದ್ದಿ

ಔದ್ಯೋಗಿಕ ಕ್ಷೇತ್ರಕ್ಕೆ ವಿದ್ಯಾರ್ಥಿಗಳ ರೂಪಿಸುವಿಕೆ’ ಕುರಿತು ಕಾರ್ಯಾಗಾರ-ಕಹಳೆ ನ್ಯೂಸ್

ಪುತ್ತೂರು: ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನ ಕೇಂದ್ರದಲ್ಲಿ ವಾಣಿಜ್ಯ ವಿಭಾಗ ಮತ್ತು ಬೆಂಗಳೂರಿನ ಐಸಿಟಿ ಅಕಾಡೆಮಿ ಆಯೋಜಿಸಿದ್ದ ‘ಔದ್ಯೋಗಿಕ ಕ್ಷೇತ್ರಕ್ಕೆ ವಿದ್ಯಾರ್ಥಿಗಳ ರೂಪಿಸುವಿಕೆ’ ಎಂಬ ವಿಷಯದ ಕುರಿತು ನಡೆದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರಿನ ಜೆ.ಬಿ.ಎಫ್. ಪೆಟ್ರೋಲ್ ಕೆಮಿಕಲ್ಸ್ ಲಿಮಿಟೆಡ್‍ನ ಪ್ರಧಾನ ವ್ಯವಸ್ಥಾಪಕ ಧೀರಜ್ ಶೆಟ್ಟಿ ಮಾತನಾಡಿದ್ರು, ಕೌಶಲ್ಯ ಮತ್ತು ಆತ್ಮವಿಶ್ವಾಸ ಇದ್ದಲ್ಲಿ ಜ್ಞಾನವು ಒದಗುತ್ತದೆ.

ಯಾವುದೇ ಗುರಿಯನ್ನು ತಲುಪಲು ಸಾಧನೆ ಅನಿವಾರ್ಯ. ಜೊತೆಗೆ ಸಂದರ್ಭಕ್ಕೆ ತಕ್ಕಂತೆ ವರ್ತಿಸುವ ಗುಣ ಮತ್ತು ಧನಾತ್ಮಕ ಅಂಶಗಳನ್ನು ಅಳವಡಿಸಿಕೊಳ್ಳಬೇಕು. ಅಲ್ಲದೇ ತಾಳ್ಮೆ, ಸಾಮಥ್ರ್ಯ, ಸಂಸ್ಕøತಿ ಮತ್ತು ಮಾನವೀಯತೆಯು ಯಾವುದೇ ಕ್ಷೇತ್ರದ ಏಳಿಗೆಗೆ ಪೂರಕ. ವೃತ್ತಿರಂಗದಲ್ಲಿ ಸ್ಪರ್ಧೆಯು ಹೆಚ್ಚಾದಂತೆ ಅವಕಾಶಗಳು ಕುಂಠಿತವಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಕೌಶಲ್ಯ ಮತ್ತು ಮೌಲ್ಯಯುತ ಅಂಶಗಳು ಉದ್ಯೋಗವನ್ನು ಒದಗಿಸುತ್ತದೆ ಎಂದು ಹೇಳಿದರು.
ಎಲ್ಲರಿಗೂ ವ್ಯಾವಹಾರಿಕ ಕಲೆಯು ಅವಶ್ಯಕ. ಹಾಗಾಗಿ ಎದುರಾಗುವ ಸಮಸ್ಯೆಗಳನ್ನು ನಿವಾರಿಸಿ, ಇತರರಿಗೆ ಸಹಾಯವನ್ನು ಮಾಡುವ ಮನೋಭಾವವನ್ನು ಹೊಂದಬೇಕು.

ಜಾಹೀರಾತು
ಜಾಹೀರಾತು
ಜಾಹೀರಾತು

ಸೋಲು ಎಂಬುದಕ್ಕೆ ಎಲ್ಲರೂ ಹಿಂಜರಿಯುತ್ತಾರೆ ಆದರೆ ಅದನ್ನೇ ಸವಾಲೆಂದು ತಿಳಿದು ಮುಂದುವರಿದರೆ ಸಮಸ್ಯೆಯ ನಿವಾರಣೆ ಸಾಧ್ಯ. ಅದರೊಂದಿಗೆ ನಡವಳಿಕೆಯು ವ್ಯಕ್ತಿಯ ಭವಿಷ್ಯವನ್ನು ರೂಪಿಸುವ ಅಂಶ ಎಂದರು.
ಅತಿಥಿಯಾಗಿ ಭಾಗವಹಿಸಿದ್ದ ಐಸಿಟಿ ಅಕಾಡೆಮಿಯ ವ್ಯವಸ್ಥಾಪಕ ರೋಹಿತ್ ಕಾಜವ, ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು ಇದರಿಂದ ಯಶಸ್ಸು ಸಾಧ್ಯ ಎಂದು ಶುಭಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಕಾಲೇಜಿನ ಪ್ರಾಚಾರ್ಯ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ಕೈಗಾರಿಕಾ ರಂಗದಲ್ಲಿ ಹೆಚ್ಚಿನ ತಯಾರಿ ಅಗತ್ಯ. ತರಗತಿಯ ಜ್ಞಾನದೊಂದಿಗೆ ಹೊರಜಗತ್ತಿನ ಜ್ಞಾನವನ್ನು ಅರಿಯಬೇಕು. ಕನಸುಗಳನ್ನು ನನಸಾಗಿಸಲು ಕೌಶಲ್ಯವು ಅವಶ್ಯಕ. ಯಾವುದೇ ಕ್ಷೇತ್ರದಲ್ಲಿ ದೃಢನಿರ್ಧಾರ ಮತ್ತು ಉತ್ತಮ ಮಾರ್ಗದರ್ಶನವನ್ನು ಅಳವಡಿಸಿಕೊಂಡರೆ ಯಶಸ್ಸು ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಕಾಲೇಜಿನ ಐಕ್ಯುಎಸಿ ಘಟಕದ ಸಂಯೋಜಕ ಡಾ. ಎಚ್.ಜಿ. ಶ್ರೀಧರ, ಸ್ನಾತಕೋತ್ತರ ವಾಣಿಜ್ಯ ಉಪನ್ಯಾಸಕರಾದ ಲಕ್ಷ್ಮೀ, ಅನನ್ಯಾ ವಿ., ರಾಘವೇಂದ್ರ, ವರ್ಷಿತ್ ವಿದ್ಯಾರ್ಥಿನಿ ರಶ್ಮಿ ಉಪಸ್ಥಿತರಿದ್ದರು. ಅನುಷ ಮತ್ತು ತಂಡದವರು ಪ್ರಾರ್ಥಿಸಿದರು. ಸ್ನಾತಕೋತ್ತರ ಅಧ್ಯಯನ ಕೇಂದ್ರದ, ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕಿ ಡಾ. ವಿಜಯ ಸರಸ್ವತಿ ಸ್ವಾಗತಿಸಿದರು. ಕೃತಿಕಾ ವಂದಿಸಿದರು. ವಿದ್ಯಾರ್ಥಿನಿ ಶ್ವೇತಾ ಕಾರ್ಯಕ್ರಮ ನಿರೂಪಿಸಿದರು.