ಕೇಂದ್ರ ಸರಕಾರವು ದೇಶದ ತೆರಿಗೆ ವ್ಯವಸ್ಥೆಯಲ್ಲಿ ಸುಧಾರಣಾ ಕ್ರಮದ ಭಾಗವಾಗಿ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ವಾಣಿಜ್ಯ ಉದ್ದೇಶದ ವಾಹನಗಳು ದೇಶಾದ್ಯಂತ ತಡೆ ರಹಿತವಾಗಿ ಮುಕ್ತವಾಗಿ ಸಂಚರಿಸಲು ಅನುವಾಗುವಂತೆ ಏಕರಾಷ್ಟ್ರ ಏಕತೆಗೆ ನೀತಿ ಜಾರಿಗೆ ತರುವಂತೆ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ರಚಿಸಿರುವ ಸಚಿವರ ತಂಡ ಪ್ರಸ್ತಾವನೆ ಸಲ್ಲಿಸಿದೆ. ಈ ವ್ಯವಸ್ಥೆ ಜಾರಿಗೆ ಬಂದಲ್ಲಿ ವಾಹನಗಳು ಪ್ರತಿ ರಾಜ್ಯದಲ್ಲಿ ತೆರಿಗೆ ಪಾವತಿಸಬೇಕಾದ ಅನಿವಾರ್ಯತೆಯಿಂದ ಪಾರಾಗಲಿದೆ.
ಇದೇ ವೇಳೆ ಬಡವರ ಪಕ್ಷ, ಕಾರ್ಮಿಕರ ಪಕ್ಷ ಎಂದೇ ಹೇಳುತ್ತಿರುವ ಸಿಪಿಐ ನೇತೃತ್ವದ ಕೇರಳ ಸರಕಾರ ಆರ್ಥಿಕ ಸಂದಿಗ್ಧತೆಯ ನೆಪವೊಡ್ಡಿ ತೆರಿಗೆ ಅವಧಿ ಮುಗಿಯದ ಹಳೆ ವಾಹನಗಳಿಗೂ ಮುಂದಿನ ಹತ್ತು ವರ್ಷಗಳ ತೆರಿಗೆ ಹಾಗೂ ಅದರೊಂದಿಗೆ ಶೇ.15ರಷ್ಟು ಬಡ್ಡಿಯನ್ನು ಒಮ್ಮೆಲೆ ಪಾವತಿಸುವಂತೆ ನೋಟೀಸ್ ಜಾರಿಗೊಳಿಸಿದ್ದು ಟ್ಯಾಕ್ಸಿ ಉದ್ಯಮವನ್ನೇ ಸ್ವ ಉದ್ಯೋಗವಾಗಿಸಿ ಜೀವನ ಮಾರ್ಗವನ್ನಾಗಿ ಸ್ವೀಕರಿಸಿದ ಬಡ ಕಾರ್ಮಿಕ ಜನರನ್ನು ಸುಲಿಯ ಹೊರಟಿದೆ.
ಆಂದ್ರ ಗಡಿಯಲ್ಲೂ ಕಿರುಕುಳ
ತಿರುಪತಿ ದರ್ಶನಕ್ಕೆ ಹೋಗುವ ಕೇರಳದ ಚಾಲಕ ಮಾಲಕರನ್ನೂ ಚೆಕ್ ಪೋಸ್ಟ್‍ನಲ್ಲಿ ದೋಚಲಾಗುತ್ತಿದೆ. ಪ್ಯಾಂಟ್, ಶೂ ಧರಿಸಿಲ್ಲ, ಕ್ಯಾಪ್ ಧರಿಸಿಲ್ಲ, ಟ್ಯಾಗ್ ಬುಕ್ ಇರಿಸಿಲ್ಲ, ನೊಂದಣಿ ಪ್ಲೇಟ್ ನೊಂದಣಿ ಅಂಕೆ ಗಾತ್ರ ಒಂದಲ್ಲಾ ಒಂದು ನೆಪ ಹೇಳಿ ಭಾರೀ ಮೊತ್ತ ಸುಲಿಗೆ ಮಾಡಲಾಗುತ್ತಿದೆ.
ಸಾರಿಗೆ ಅಧಿಕಾರಿ, ಕಾಸರಗೋಡು ಪ್ರಾದೇಶಿಕ ಸಾರಿಗೆ ಇಲಾಖೆ ‘ಸಮಾನಾಂತರ ಕಳ್ಳ ಟ್ಯಾಕ್ಸಿ, ಕೇರಳದಲ್ಲಿ ಸೆಸ್ಸ್, ತೆರಿಗೆ, ವಿಮೆ, ತೈಲ, ಟೈರ್, ಬಿಡಿ ಭಾಗಗಳ ಬೆಲೆ ಏರಿಕೆಯಿಂದ ಸ್ವ ಉದ್ಯೋಗ, ಜೀವನ ನಿರ್ವಹಣೆಗೆ ಬ್ಯಾಂಕ್ ಇತರ ಮೂಲಗಳಿಂದ ಸಾಲ ಮಾಡಿ ಟ್ಯಾಕ್ಸಿ ವಾಹನ ಖರೀದಿಸಿ ಬಾಡಿಗೆ ನಡೆಸುವ ಬಹಳಷ್ಟು ಮಂದಿ ಸಂಕಷ್ಟಕ್ಕೆ ಸಿಲುಕಿರುವಾಗ, ಕಾರ್ಮಿಕ ಪರ ಪಕ್ಷ, ಎಲ್ಲವನ್ನೂ ಸರಿಮಾಡುತ್ತೇವೆ ಎಂದು ಅಧಿಕಾರಕ್ಕೇರಿದ ಕಮ್ಯೂನಿಸ್ಟ್ ಪಕ್ಷ ನೇತೃತ್ವದ ಕೇರಳ ಸರಕಾರ ಆರ್ಥಿಕ ಮುಗ್ಗಟ್ಟಿನ ನೆಪ ಒಡ್ಡಿ ತೆರಿಗೆ ಅವಧಿ ಮುಗಿಯದ ವಾಹನಗಳಿಗೆ ಮುಂದಿನ ಹತ್ತು ವರ್ಷಗಳ ಅವಧಿಗೆ ತೆರಿಗೆ ಹಾಗೂ ಭಾರೀ ಮೊತ್ತದ ಬಡ್ಡಿ ಯನ್ನೂ ವಿಧಿಸಿರುವುದು ನಿಜಕ್ಕೂ ಶಾಕ್ ನೀಡಿದೆ.
ನನ್ನ ಶಿಫ್ಟ್ ಟ್ಯಾಕ್ಸಿ ವಾಹನಕ್ಕೆ ಸಾರಿಗೆ ಇಲಾಖೆ ಯಾವುದೇ ನೋಟೀಸ್ ನೀಡಿಲ್ಲ. ಬದಲಾಗಿ ಗ್ರಾಮ ಕಚೇರಿ ಅಧಿಕಾರಿಗಳು ವಾಹನವನ್ನು ಮುಟ್ಟುಗೋಲು ಹಾಕಲು ಬಂದಿದ್ದು ಅವರ ಶುಲ್ಕವೂ ಸೇರಿ ಭಾರೀ ಮೊತ್ತ ಪಾವತಿಸಬೇಕಾಗಿ ಬಂತು ಎಂದು ಮನೋಜ್ ಸ್ರಾಂಬಕ್ಕಲ್ ಹೇಳಿದರು.