Thursday, January 23, 2025
ಸುದ್ದಿ

ಹಾವೇರಿ: ವರದಾ ನದಿಯಲ್ಲಿ ಕಾಲು ಜಾರಿ ಯುವಕ, ವೃದ್ಧ ನೀರುಪಾಲು-ಕಹಳೆ ನ್ಯೂಸ್

ಹಾವೇರಿ: ವರದಾ ನದಿಯಲ್ಲಿ ಕಾಲು ಜಾರಿ ಯುವಕನೋರ್ವ ನೀರುಪಾಲಾಗಿದ್ದು , ರಕ್ಷಿಸಲು ಮುಂದಾಗಿದ್ದ ಮತ್ತೊಬ್ಬ ವೃದ್ಧನು ಕೊಚ್ಚಿ ಹೋದ ಘಟನೆ ಹಂದಿಗನೂರು ಗ್ರಾಮದ ಬಳಿ ನಡೆದಿದೆ.

ಪ್ರಶಾಂತ ಸೋಮಪ್ಪ ಕೊಂಚಿಗೇರಿ (18) ಮತ್ತು ಪರಮೇಶಪ್ಪ ಕಮ್ಮಾರ (62) ನೀರುಪಾಲಾದ ದುರ್ದೈವಿಗಳು.

ಜಾಹೀರಾತು
ಜಾಹೀರಾತು
ಜಾಹೀರಾತು

ಎತ್ತಿನ ಮೈ ತೊಳೆಯಲು ಮಾವನ ಜೊತೆ ಹೋಗಿದ್ದ ಪ್ರಶಾಂತ್ ಕಾಲುಜಾರಿ ವರದಾ ನದಿಯಲ್ಲಿ ಮುಳುಗಿದ್ದಾರೆ. ಇದನ್ನು ಕಂಡು ಅಲ್ಲೆ ಸ್ನಾನ ಮಾಡುತ್ತಿದ್ದ ವೃದ್ಧರೋರ್ವರು ಪ್ರಶಾಂತ್ ರಕ್ಷಣೆಗೆ ಮುಂದಾಗಿದ್ದರು. ಆದರೆ ನೀರಿನ ರಭಸ ಹೆಚ್ಚಾಗಿದ್ದರಿಂದ ಇಬ್ಬರೂ ಕೂಡ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಹೋಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು , ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದಾರೆ.

ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.