Thursday, January 23, 2025
ಸುದ್ದಿ

ಮದ್ಯದ ಅಮಲಿನಲ್ಲಿ ನಡುರಸ್ತೆಯಲ್ಲೇ ವಕೀಲೆ ‘ರಂಪಾಟ’-ಕಹಳೆ ನ್ಯೂಸ್

ಕಂಠಪೂರ್ತಿ ಮದ್ಯ ಸೇವಿಸಿದ ವಕೀಲೆಯೊಬ್ಬರು ಅಮಲಿನಲ್ಲಿ ತಮ್ಮ ಕಾರನ್ನು ಗೂಡ್ಸ್ ಆಟೋಗೆ ಡಿಕ್ಕಿ ಹೊಡೆಸಿದ್ದಲ್ಲದೆ ಕ್ರಮ ಕೈಗೊಳ್ಳಲು ಮುಂದಾದ ಪೊಲೀಸರನ್ನೇ ನಿಂದಿಸಿದ್ದಾರೆ.

ಕಳೆದ ರಾತ್ರಿ ರಾಜ್ಯ ರಾಜಧಾನಿ ಬೆಂಗಳೂರಿನ ತಿಲಕ ನಗರ ಮುಖ್ಯರಸ್ತೆಯ ಪೊಲೀಸ್ ಠಾಣೆ ಎದುರಿನಲ್ಲೇ ಈ ಘಟನೆ ನಡೆದಿದ್ದು, ವೇಗವಾಗಿ ಕಾರು ಚಲಾಯಿಸಿಕೊಂಡು ಬಂದ ವಕೀಲೆ ಗೂಡ್ಸ್ ಆಟೋಗೆ ಹಿಂದಿನಿಂದ ಡಿಕ್ಕಿ ಹೊಡೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ವಕೀಲೆಯನ್ನು ಕಾರಿನಿಂದ ಕೆಳಗಿಳಿಯುವಂತೆ ಹೇಳಿದರೂ ಅದಕ್ಕೆ ಜಗ್ಗದೆ ಒಂದೂವರೆ ಗಂಟೆಗಳ ಕಾಲ ಕಾರಿನಲ್ಲಿ ಕುಳಿತು ಸತಾಯಿಸಿದ್ದಾರೆ. ಜೊತೆಗೆ ಪೊಲೀಸರ ವಿಡಿಯೋವನ್ನು ತಮ್ಮ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಡೆಗೂ ಮಹಿಳಾ ಪೊಲೀಸರೊಬ್ಬರ ಸಹಾಯದಿಂದ ವಕೀಲೆಯನ್ನು ಕೆಳಗಿಳಿಸಲಾಗಿದ್ದು, ಆಸ್ಪತ್ರೆಯಲ್ಲಿ ಮದ್ಯ ಸೇವಿಸುವುದರ ಪರೀಕ್ಷೆ ಮಾಡಿಸಿ ಬಳಿಕ ಪ್ರಕರಣ ದಾಖಲಿಸಿದ್ದಾರೆ.