Friday, January 24, 2025
ರಾಜಕೀಯ

ಈ ಬಾರಿಯಾದರೂ ಪ್ರಬಲ ಅಭ್ಯರ್ಥಿ “ನವಾಝ್ ಜೆಪ್ಪು” ರವರಿಗೆ ಮ.ನ.ಪಾ ಚುನಾವಣೆಯಲ್ಲಿ ನಿಲ್ಲಲು ಅವಕಾಶ ಸಿಗುವಂತಾಗಲಿ – ಕಹಳೆ ನ್ಯೂಸ್

ಮಂಗಳೂರು: 2019ರ ಮಂಗಳೂರು ಮಹಾ ನಗರ ಪಾಲಿಕೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಟಿಕೆಟ್ ಲೆಕ್ಕಾಚಾರ ನಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಪಕ್ಷದ ನಾಯಕರು ಈ ಬಾರಿಯಾದರೂ ಟಿಕೆಟ್ ನೀಡುವಾಗ ಪಕ್ಷಕ್ಕಾಗಿ ನಿರಂತರ ಬೆನ್ನೆಲುಬಾಗಿ ನಿಲ್ಲುವವರಿಗೆ ಅಭ್ಯರ್ಥಿ ಸ್ಥಾನ ನೀಡಲಿದ್ದಾರ ನೋಡ ಬೇಕಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ಬಾರಿ ಅತ್ತಾವರ ವಾರ್ಡಿನಿಂದ ಟಿಕೆಟ್ ವಂಚಿತರಾದ ನವಾಝ್ ಜೆಪ್ಪು ಈ ಭಾರಿಯ ಟಿಕೇಟ್ ಆಕಾಂಕ್ಷಿಯಾಗಿದ್ದು, ಕಾರ್ಪೋರೇಟರ್ ಅಭ್ಯರ್ಥಿಯಾಗಿ ಆಯ್ಕೆ ಮಾಡಬೇಕೆಂದು ಬಹುಜನರ ಅಪೇಕ್ಷೆಯಾಗಿದೆ. ಜನರಿಗಾಗಿ ಮಿಡಿಯುವ ಇವರು ಸುಮಾರು ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ಸ್ಥಳೀಯ ಎಲ್ಲಾ ಜನರ ಹಾಗೂ ಪಕ್ಷದ ಯುವ ಕಾರ್ಯಕರ್ತರ ನೆಚ್ಚಿನ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾತಿ ಮತ ಭೇದವಿಲ್ಲದೆ ವಾರ್ಡಿನ ಜನರ ಸಮಸ್ಯೆಗಳನ್ನು ಕ್ಷಣಮಾತ್ರದಲ್ಲಿ ಸ್ಪಂದಿಸುವ ನವಾಝ್ ಜೆಪ್ಪು, ಬಡವರ ಬಗ್ಗೆ ಹೆಚ್ಚಿನ ಕಾಳಜಿವಹಿಸಿಕೊಂಡು ಸಾಮಾಜಿಕ ರಂಗದಲ್ಲಿ ತೊಡಗಿಕೊಂಡಿರುವ ಆಪತ್ಭಾಂಧವ. ನೊಂದವರ ಬದುಕಿಗೆ ಆಸರೆಯಾಗಿ ಕಳೆದ ಹಲವಾರು ವರ್ಷಗಳಿಂದ, ನಿರಂತರ ಸೇವೆಯಲ್ಲಿ ಕೆಲಸ ನಿರ್ವಹಿಸಿ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಅದಲ್ಲದೇ ರಕ್ತದಾನದ ಮೂಲಕ ಹಲವಾರು ಯುವಕರ ಗುಂಪನ್ನೇ ಕಟ್ಟಿಕೊಂಡಿದ್ದಾರೆ. ಇನ್ನು ಪರಿಸರದಲ್ಲಿರುವ ಅನೇಕ ಯುವ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುತ್ತಿರುವ ಇವರು ಮೂಲತಃ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ, ನಿಷ್ಠಾವಂತ ಪ್ರಾಮಾಣಿಕ ಸಂಘಟನಾ ಚತುರರು ಎಂದರೆ ಖಂಡಿತಾ ತಪ್ಪಾಗಲಾರದು. ತಮ್ಮ ವಾರ್ಡಿನಲ್ಲಿ ಪಕ್ಷ ಸಂಘಟಿಸಿ ತಮ್ಮದೆ ಯುವಕರ ಪಡೆ ಕಟ್ಟಿಕೊಂಡಂತವರು.

ನವಾಝ್ ಜೆಪ್ಪು ರವರು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದಲ್ಲಿ ಕಳೆದ ಹಲವಾರು ವರ್ಷಗಳಿಂದ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ದಕ್ಷಿಣ ಬ್ಲಾಕ್ ಕಾಂಗ್ರೆಸ್ಸಿನ ಕಾರ್ಯದರ್ಶಿಯಾಗಿ,ಅತ್ತಾವರ ವಾರ್ಡಿನ ಮಾಜಿ ಯುವ ಕಾಂಗ್ರೆಸ್ಸಿನ ಅಧ್ಯಕ್ಷರಾಗಿ,ಸೌತ್ ವೆಲ್ಫೇರ್ ಅಸೋಸಿಯೇಷನ್ ಮತ್ತು ಅಲ್ ಸಾದ್ ವೆಲ್ಫೇರ್ ಇದರ ಸದಸ್ಯರಾಗಿ ಹಾಗೂ ಹಲವಾರು ಸಾಮಾಜಿಕ ಸಂಘಸಂಸ್ಥೆಗಳಲ್ಲಿ, ನಿರಂತರವಾಗಿ ಸೇವೆ ಸಲ್ಲಿಸಿ ಪರಿಸರದ ಜನರ ಮನಗೆದ್ದುಕೊಂಡು ಕಾಂಗ್ರೆಸ್ ಪಕ್ಷದ ಅತ್ಯಂತ ಕ್ರಿಯಾಶೀಲವುಳ್ಳ ಚುರುಕಿನ ನಾಯಕರಾಗಿದ್ದಾರೆ.

ಆದ್ದರಿಂದ ಈ ಬಾರಿ ನಡೆಯಲಿರುವ 2019ರ ಮಂಗಳೂರು ಮಹಾ ನಗರ ಪಾಲಿಕೆ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಅತ್ತಾವರ ವಾರ್ಡಿನ ಅಭ್ಯರ್ಥಿಯಾಗಿ ನವಾಝ್ ಜೆಪ್ಪು ರವರು ಆಯ್ಕೆ ಯಾಗಲಿ ಅನ್ನೋದು ಜನತೆಯ ಒಕ್ಕೊರಳ ಅಭಿಮತವಾಗಿದೆ. ಟೀಕೇಟ್ ಆಕಾಂಕ್ಷಿಯಾಗಿರುವ ಇವರನ್ನ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಪಕ್ಷದ ನಾಯಕರು ಈ ಬಾರಿಯಾದರೂ ಆಯ್ಕೆ ಮಾಡುತ್ತಾರಾ ನೋಡಬೇಕಾಗಿದೆ.