Friday, November 29, 2024
ಸುದ್ದಿ

ನೂರಾರು ಮೀನುಗಾರಿಕಾ ಬೋಟ್‌ಗಳಿಗೆ ಎನ್‌ಎಂಪಿಟಿಯಲ್ಲಿ ರಕ್ಷಣೆ-ಕಹಳೆ ನ್ಯೂಸ್

ಮಂಗಳೂರು: ಭಾರತದ ಪಶ್ಚಿಮ ಕರಾವಳಿಯಲ್ಲಿ ಹವಾಮಾನ ವೈಪರೀತ್ಯ ಉಂಟಾಗಿರುವುದರಿಂದ ಮೀನುಗಾರಿಕೆಯಲ್ಲಿ ತೊಡಗಿದ್ದ 100ಕ್ಕೂ ಅಧಿಕ ಬೋಟುಗಳಿಗೆ ನವಮಂಗಳೂರು ಬಂದರ್(ಎನ್‌ಎಂಪಿಟಿ)ನಲ್ಲಿ ರಕ್ಷಣೆ ಒದಗಿಸಲಾಗಿದೆ.

ಅರಬಿ ಸಮುದ್ರದಲ್ಲಿನ ತೀವ್ರ ವಾಯುಭಾರ ಕುಸಿತವು ಕ್ಯಾರ್ ಚಂಡಮಾರುತವಾಗಿ ರೂಪುಗೊಂಡಿದೆ. ಈ ಹಿನ್ನೆಲೆಯಲ್ಲಿ ಭಾರತದ ಪಶ್ಚಿಮ ಕರಾವಳಿಯಲ್ಲಿ ಸಮುದ್ರ ಪ್ರಕ್ಷುಬ್ಧಗೊಂಡಿದೆ. ಈ ಹಿನ್ನೆಲೆಯಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದ ನೂರಾರು ಬೋಟ್‌ಗಳಿಗೆ ಕೋಸ್ಟ್ ಗಾರ್ಡ್ ಸಹಕಾರದಲ್ಲಿ ಎನ್‌ಎಂಪಿಟಿಯಲ್ಲಿ ಆಶ್ರಯ ಒದಗಿಸಲಾಗಿದೆ. ಮೀನುಗಾರಿಕಾ ಬೋಟ್‌ಗಳಲ್ಲಿದ್ದ ಸಾವಿರಕ್ಕೂ ಅಧಿಕ ಮೀನುಗಾರರನ್ನು ರಕ್ಷಿಸಲಾಗಿದ್ದು, ಅವರಿಗೆ ಬಂದರ್‌ನ ಸುರಕ್ಷಿತ ವಲಯದಲ್ಲಿ ಆಶ್ರಯ ಕಲ್ಪಿಸಲಾಗಿದೆ ಎಂದು ಎನ್‌ಎಂಪಿಟಿ ಪ್ರಕಟನೆ ತಿಳಿಸಿದೆ

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು