Sunday, January 26, 2025
ಸುದ್ದಿ

ಪ್ರೀತಿಸಿದ ಹುಡುಗಿ ಮದುವೆಯಾಗಲು ನಿರಾಕರಿಸಿ ಆಸ್ಪತ್ರೆ ಸೇರಿದ ಯುವಕ-ಕಹಳೆ ನ್ಯೂಸ್

ಪ್ರೀತಿಸಿ ಮದುವೆಯಾಗಲು ನಿರಾಕರಿಸಿದ ಯುವಕನೊಬ್ಬ ಈಗ ಆಸ್ಪತ್ರೆ ಸೇರಿದ್ದಾನೆ. ಮದುವೆಯಾಗಲು ನಿರಾಕರಿಸಿದ ಪ್ರೇಮಿಗೆ ಪ್ರಿಯತಮೆ ಆಸಿಡ್ ಹಾಕಿದ್ದಾಳೆ. ಗುರುವಾರ ರಾತ್ರಿ ಉತ್ತರ ಪ್ರದೇಶದ ಅಲಿಗಢದಲ್ಲಿ ಘಟನೆ ನಡೆದಿದೆ.

ಸ್ಥಳೀಯ ಅಂಗಡಿಯಲ್ಲಿ ಪ್ರೇಮಿ ವಸ್ತುಗಳನ್ನು ಖರೀದಿ ಮಾಡ್ತಿದ್ದನಂತೆ. ಅಲ್ಲಿಗೆ ಬಂದ ಪ್ರಿಯತಮೆ ಪ್ರೇಮಿಗೆ ಎಸಿಡ್ ಹಾಕಿದ್ದಾಳೆ. ಅಕ್ಕಪಕ್ಕದಲ್ಲಿದ್ದವರಿಗೂ ಸ್ವಲ್ಪ ಎಸಿಡ್ ತಾಗಿದೆ. ಪ್ರೇಮಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಿಯತಮೆ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಫೈಜಾದ್ ಹಾಗೂ ಮುಸ್ಕಾನ್ ಅನೇಕ ದಿನಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಮದುವೆ ವಿಷ್ಯ ಬಂದಾಗ ಫೈಜಾದ್, ಮುಸ್ಕಾನ್ ಭೇಟಿಯಾಗುವುದನ್ನು ಬಿಟ್ಟಿದ್ದಾನೆ. ಫೋನ್ ಕೂಡ ಸ್ವೀಕರಿಸುತ್ತಿರಲಿಲ್ಲವಂತೆ. ಇದ್ರಿಂದ ಕೋಪಗೊಂಡ ಮುಸ್ಕಾನ್, ಆಸಿಡ್ ದಾಳಿ ನಡೆಸಿದ್ದಾಳೆ.

ಜಾಹೀರಾತು
ಜಾಹೀರಾತು
ಜಾಹೀರಾತು