Tuesday, January 28, 2025
ಸುದ್ದಿ

ಒಡಿಶಾದ ಹೊಟೇಲ್‌ನಲ್ಲಿ ಆರ್‌ಬಿಐ ಅಧಿಕಾರಿ ಆತ್ಮಹತ್ಯೆ-ಕಹಳೆ ನ್ಯೂಸ್

ಒಡಿಶಾದ ಜೈಪುರದ ಹೊಟೇಲ್‌ವೊಂದರಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ(ಆರ್‌ಬಿಐ)ಜನರಲ್ ಮ್ಯಾನೇಜರ್‌ವೊಬ್ಬರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಮೃತ ವ್ಯಕ್ತಿಯನ್ನು ಜೈಪುರ ಜಿಲ್ಲೆಯ ನರಹರಿಪುರದಲ್ಲಿ ಗ್ರಾಮದ ಆಶೀಶ್ ರಂಜನ್ ಸಮಾಲ್ ಎಂದು ಗುರುತಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆಶೀಶ್ ತನ್ನ ತಾಯಿಯನ್ನು ಭೇಟಿಯಾಗಲು ತನ್ನ ಹಳ್ಳಿಗೆ ಬಂದಿದ್ದರು. ಆ ಬಳಿಕ ಕಳಿಂಗ ವೈದ್ಯಕೀಯ ವಿಜ್ಞಾನಸಂಸ್ಥೆಯ ವೈದ್ಯರಾಗಿರುವ ತನ್ನ ಪತ್ನಿಯನ್ನು ಭೇಟಿಯಾಗಲು ಭುವನೇಶ್ವರಕ್ಕೆ ತೆರಳಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಶುಕ್ರವಾರ ಬೆಳಗ್ಗೆ ಹೊಟೇಲ್ ಸಿಬ್ಬಂದಿ ಕೊಠಡಿಯ ಬಾಗಿಲು ಬಡಿದರೂ ಯಾವುದೇ ಪ್ರತಿಕ್ರಿಯೆ ಲಭಿಸಿರಲಿಲ್ಲ. ಆಗ ಹೊಟೇಲ್ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು.