ರಷ್ಯನ್ ಸರ್ಕಸ್ನಲ್ಲಿ ಪ್ರದರ್ಶನದ ವೇಳೆಯೇ ತರಬೇತುದಾರನ ಮೇಲೆ ಕರಡಿಯೊಂದು ಹಲ್ಲೆ ನಡೆಸಿದ್ದು, ಆತನ ತಲೆ ಮತ್ತು ಕುತ್ತಿಗೆಗೆ ಪೆಟ್ಟು ಕೊಟ್ಟು ನೆಲಕ್ಕೆ ಉರುಳಿಸಿದ ಘಟನೆ ಉತ್ತರ ರಷ್ಯಾದ ಒಲೊನೆಟ್ಸ್ನಲ್ಲಿ ನಡೆದಿದೆ.
ಇನ್ನೊಬ್ಬ ತರಬೇತುದಾರ ತನ್ನ ಸಹೋದ್ಯೋಗಿಯನ್ನು ರಕ್ಷಿಸಲು ಕರಡಿಗೆ ಒದೆ ನೀಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
272 ಕಿ.ಗ್ರಾಂ. ಭಾರದ ಕರಡಿ ಅದರ ಹಿಂಗಾಲುಗಳ ಮೇಲೆ ನಡೆಯುತ್ತ, ಚಕ್ರಬಂಡಿಯನ್ನು ತಳ್ಳುತ್ತಿರುವಾಗ, ಆ ದೈತ್ಯ ಪ್ರಾಣಿ ಆಕಸ್ಮಿಕವಾಗಿ ತನ್ನ ತರಬೇತುದಾರನ ಮೇಲೆ ಹಲ್ಲೆ ನಡೆಸುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.