Monday, November 25, 2024
ಸುದ್ದಿ

ಮನೆ ಕಟ್ಟೋರಿಗೆ ಭರ್ಜರಿ ಗುಡ್ ನ್ಯೂಸ್’ : ಮಲೇಷ್ಯಾ ಮರಳಿನ ದರ ಇಳಿಕೆಗೆ ಚಿಂತನೆ-ಕಹಳೆ ನ್ಯೂಸ್

ಬೆಂಗಳೂರು : ಮನೆ ಕಟ್ಟೋರಿಗೆ ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ ಭರ್ಜರಿ ಸಿಹಿಸುದ್ದಿ ನೀಡಲು ಮುಂದಾಗಿದ್ದು, ಮಲೇಷ್ಯಾ ಮರಳಿನ ದರವನ್ನು ಪ್ರತಿ ಟನ್ ಗೆ 100 ರಿಂದ 150 ರೂ. ವರೆಗೆ ಇಳಿಕೆ ಮಾಡಲು ಚಿಂತನೆ ನಡೆಸಿದೆ.

ರಾಜ್ಯದಲ್ಲಿ ಮರಳಿನ ಕೊರತೆ ನಿವಾರಿಸಲು ಮಲೇಷ್ಯಾದಿಂದ ಆಮದು ಮಾಡಿಕೊಂಡು ಮಾರಾಟ ಮಾಡುತ್ತಿರುವ ಮರಳನ್ನು ಗ್ರಾಹಕರು ಖರೀದಿಸುವಂತೆ ಉತ್ತೇಜಿಸಲು ಎಂಎಸ್‌ಐಎಲ್ ಮರಳಿನ ದರವನ್ನು ಇಳಿಸಲು ಚಿಂತನೆ ನಡೆಸಿದೆ. ಸದ್ಯ ಪ್ರತಿ ಟನ್ ಮಲೇಷ್ಯಾ ಮರಳಿನ ದರ 3,500 ರೂ. ಇದೆ. ಆಂಧ್ರಪ್ರದೇಶದ ಕೃಷ್ಣಪಟ್ಟಣಂನಿಂದ ರಸ್ತೆ ಮಾರ್ಗವಾಗಿ ಸಾಗಿಸಿದರೆ ಸಾಗಣೆ ವೆಚ್ಚ ತಗ್ಗುವ ಲೆಕ್ಕಾಚಾರದಲ್ಲಿ ದರ ಇಳಿಕೆ ಬಗ್ಗೆ ಚಿಂತಿಸಿದೆ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆರಂಭದಲ್ಲಿ ಪ್ರತಿ ಟನ್ ಮಲೇಷ್ಯಾ ಮರಳಿನ ಬೆಲೆ 4 ಸಾವಿರ ರೂ. ಇತ್ತು. ವಿದೇಶಿ ಮರಳು ಖರೀದಿಯನ್ನು ಉತ್ತೇಜಿಸಲು ಬಳಿಕ ದರ ಇಳಿಕೆ ಮಾಡಿ ಪ್ರತಿ ಟನ್ ಮರಳಿನ ದರ 3,500 ರೂ.ಗೆ ಇಳಿಸಲಾಗಿತ್ತು. ಇದೀಗ ಮತ್ತೆ ಮರಳಿನ ದರ ಇಳಿಕೆ ಮಾಡಲು ಚಿಂತನೆ ನಡೆಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು