ಕಡಬ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಗಾಳಿಮಳೆಗೆ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಇಚ್ಲಂಪ್ಪಾಡಿ ಪಳಿಕೆ ಎಂಬಲ್ಲಿ ಚೋಮು ಎಂಬ ಬಡ ಮಹಿಳೆಯ ಮನೆಯು ಸಂಪೂರ್ಣ ಕುಸಿದಿದೆ.
ಪಂಚಾಯತ್ ವತಿಯಿಂದ ಈ ಹಿಂದೆ ನೀಡಿದ್ದ ಮನೆಯ ಕೆಲಸವೂ ಅರ್ಧದಲ್ಲೇ ಬಾಕಿಯಾಗಿ ಇದೀಗ ಇವರು ವಾಸಕ್ಕೆ ಮನೆ ಇಲ್ಲದೇ ಕಂಗಾಲಾಗಿದ್ದಾರೆ. ಶುಕ್ರವಾರ ಸಂಜೆ ಬೀಸಿದ ಬಿರುಗಾಳಿಗೆ ಚೋಮು ವಾಸವಿದ್ದ ಮನೆಯ ಮೇಲ್ಛಾವಣಿ ಸಂಪೂರ್ಣವಾಗಿ ಕುಸಿದಿದೆ. ಈ ವೇಳೆ ಮನೆಯ ಒಳಗಡೆ ಇದ್ದ ಮಕ್ಕಳು ಸೇರಿದಂತೆ ನಾಲ್ವರು ಯಾವುದೇ ಅಪಾಯಗಳಿಲ್ಲದೆ ಪಾರಾಗಿದ್ದಾರೆ.
ಕೌಕ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಎಂ.ಕೆ. ಇಬ್ರಾಹೀಂ ಹಾಗೂ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ತುರ್ತು ಪರಿಹಾರ ಕಲ್ಪಿಸುವ ಭರವಸೆ ನೀಡಿದ್ದಾರೆ. ಈ ವೇಳೆ ತಾಲೂಕು ಪಂಚಾಯತ್ ಮಾಜಿ ಸದಸ್ಯ ಭಾಸ್ಕರ ಗೌಡ ಇಚ್ಲಂಪ್ಪಾಡಿ, ಅನಿಲ್ ಕುಮಾರ್ ಉಮೇಸಾಗು, ಡೇವಿಡ್ ಇಚ್ಲಂಪ್ಪಾಡಿ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.