Sunday, November 24, 2024
ಸುದ್ದಿ

ಮಂಗಳೂರು: ತುಂಬು ಗರ್ಭಿಣಿ ಪೋಲಿಸ್ ಪೇದೆಗೆ ಬಂದೋಬಸ್ತ್ ಜವಾಬ್ದಾರಿ – ಸ್ಪಷ್ಟೀಕರಣ ಕೇಳಿದ ಪೋಲಿಸ್ ಆಯುಕ್ತರು-ಕಹಳೆ ನ್ಯೂಸ್

ಮಂಗಳೂರು: ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಅವರ ಜಿಲ್ಲೆಯ ಭೇಟಿ ಸಂಧರ್ಭದಲ್ಲಿ ತುಂಬು ಗರ್ಭಿಣಿ ಪೋಲಿಸ್ ಪೇದೆಯೋರ್ವರಿಗೆ ಬಂದೋಬಸ್ತ್ ಕೆಲಸಕ್ಕೆ ನಿಯಮಿಸಿದ ವಿಚಾರದಲ್ಲಿ ಪೋಲಿಸ್ ಆಯುಕ್ತರಾದ ಡಾ| ಹರ್ಷ ಪಿ ಎಸ್ ಮೂಲ್ಕಿ ಸರ್ಕಲ್ ಇನ್ಪೆಕ್ಟರ್ ರವರಲ್ಲಿ ಸ್ಪಷ್ಟೀಕರಣ ಕೇಳಿದ್ದಾರೆ.


ಅಕ್ಟೋಬರ್ 25 ರಂದು ಉಪಮುಖ್ಯಮಂತ್ರಿ ಅವರು ಜಿಲ್ಲೆಗೆ ಭೇಟಿ ನೀಡಿದ್ದರು. ಈ ಸಂಧರ್ಭ ಮೂಲ್ಕಿ ಬಸ್ ನಿಲ್ದಾನ ಪರಿಸರದ ಬಂದೋಬಸ್ತ್ ಜವಾಬ್ದಾರಿಯನ್ನು ತುಂಬು ಗರ್ಭಿಣಿಯಾದ ಮಹಿಳಾ ಪೋಲಿಸ್ ಪೇದೆಯೋರ್ವರಿಗೆ ನೀಡಲಾಗಿತ್ತು. ಲಾಠಿ ಹಿಡಿದು ಮಳೆ ಹಾಗೂ ಗಾಳಿಯನ್ನು ಲೆಕ್ಕಿಸದೆ ತನಗೆ ನೀಡಿದ ಕೆಲಸವನ್ನು ನಿರ್ವಹಿಸುತ್ತಿದ್ದ ಪೇದೆಯನ್ನು ಕಂಡು ನಾಗರಿಕರು ಕನಿಕರ ವ್ಯಕ್ತಪಡಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಮಹಿಳಾ ಪೇದೆಯವರು ತಮ್ಮ ಕೆಲಸ ನಿಭಾಯಿಸುತ್ತಿರುವ ಚಿತ್ರಗಳನ್ನು ಲಗತ್ತಿಸಿ ಪೋಲಿಸ್ ಇಲಾಖೆಯ ಮೇಲೆ ಅಕ್ರೋಶ ವೆಕ್ತಪಡಿಸಿದ್ದರು. ನಂತರ ಜಿಲ್ಲೆಯ ಪತ್ರಕರ್ತರೊಬ್ಬರು ಈ ವಿಚಾರವನ್ನು ಪೋಲಿಸ್ ಆಯುಕ್ತರ ಗಮನಕ್ಕೆ ತಂದಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಘಟನೆಯ ಬಗ್ಗೆ ತೀವ್ರ ಅಸಮಧಾನಗೊಂಡಿರುವ ಪೋಲಿಸ್ ಆಯುಕ್ತರು , ಗರ್ಭಿಣಿ ಪೇದೆಯನ್ನು ಹೆರಿಗೆ ರಜೆಯಲ್ಲಿ ತೆರಳಲು ಸೂಚಿಸುವ ಬದಲು ತೀವೃ ಮಳೆಯ ಸಂಧರ್ಭದಲ್ಲಿ ಉಪಮುಖ್ಯಮಂತ್ರಿಯವರ ಬಂದೋಬಸ್ತಿಗೆ ನಿಯಮಿಸಿದ್ದು ತಪ್ಪು ಎಂದು ಅಭಿಪ್ರಾಯಪಟ್ಟಿದ್ದಾರೆ.

ಘಟನೆ ಗಮನಕ್ಕೆ ಬಂದ ತಕ್ಷಣ ಡಾ| ಹರ್ಷ ಅವರು ಉತ್ತರ ವಲಯ ಸಹಾಯಕ ಪೋಲಿಸ್ ಆಯುಕ್ತರಿಗೆ ತನಿಖೆ ನಡೆಸಿ ವರದಿ ನೀಡುವಂತೆ ಅದೇಶಿಸಿದ್ದಾರೆ.