Sunday, November 24, 2024
ಸುದ್ದಿ

ಕೊಳವೆಬಾವಿಯಲ್ಲಿ ಬಿದ್ದ ಎರಡು ವರ್ಷದ ಬಾಲಕನ ರಕ್ಷಣೆಗೆ ಹಿನ್ನಡೆ; ಮತ್ತೂ ಆಳಕ್ಕೆ ಜಾರಿದ ಮಗು, ಅಳುವ ಶಬ್ದವೂ ಕೇಳುತ್ತಿಲ್ಲ.–ಕಹಳೆ ನ್ಯೂಸ್

ಕೇರಳ: ತಿರುಚಿರಾಪಳ್ಳಿಯ ನಾಡುಕಟ್ಟುಪಟ್ಟಿಯಲ್ಲಿ ಕೊಳವೆಬಾವಿಗೆ ಬಿದ್ದಿದ್ದ ಎರಡು ವರ್ಷದ ಬಾಲಕನ ರಕ್ಷಣಾ ಕಾರ್ಯ ಮೂರು ದಿನಗಳಿಂದ ನಡೆಯುತ್ತಿದ್ದು ಇನ್ನೂ ಜಟಿಲವಾಗಿಯೇ ಪರಿಣಮಿಸಿದೆ.

ಶುಕ್ರವಾರ ಸಂಜೆ ಮನೆಯೆದುರು ಆಟವಾಡುತ್ತಿದ್ದ ಸುಜಿತ್​ ವಿಲ್ಸನ್​ ಎಂಬ ಎರಡುವರ್ಷದ ಬಾಲಕ ಬೋರ್​ವೆಲ್​ಗೆ ಬಿದ್ದಿದ್ದಾನೆ. ನಿನ್ನೆ ಕೂಡ ರಕ್ಷಣಾ ತಂಡಗಳು ಬಾಲಕನನ್ನು ಮೇಲೆತ್ತಲು ಹರಸಾಹಸ ಮಾಡಿವೆ. ಆದರೆ ಈಗ ಆ ಬಾಲಕ ಬೋರ್​ವೆಲ್​ ಮತ್ತೊಂದು ಬದಿಗೆ ಜಾರಿರುವ ಹಿನ್ನೆಲೆಯಲ್ಲಿ ರಕ್ಷಣೆಗೆ ಹಿನ್ನಡೆಯಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಾಲಕ ಬೋರ್​ವೆಲ್​ಗೆ ಬಿದ್ದಾಗ ಸುಮಾರು 35 ಅಡಿ ಆಳದಲ್ಲಿ ಸಿಲುಕಿದ್ದ. ಆದರೆ ಈಗ ಮತ್ತೂ ಆಳಕ್ಕೆ ಜಾರಿದ್ದು ಸುಮಾರು 70 ಅಡಿ ಆಳದಲ್ಲಿದ್ದಾನೆ. ಆತನಿಗೆ ಉಸಿರಾಡಲು ಕೊಳವೆಬಾವಿಯೊಳಗೆ ನಿರಂತರವಾಗಿ ಆಕ್ಸಿಜನ್​ ಪೂರೈಕೆ ಮಾಡಲಾಗುತ್ತಿದೆ. ಸುಮಾರು ಆರು ರಕ್ಷಣಾ ತಂಡಗಳು ಬಾಲಕನನ್ನು ಮೇಲೆತ್ತಲು ನಿರಂತರವಾಗಿ ಪ್ರಯತ್ನಿಸುತ್ತಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಮಗೆ ಮೊನ್ನೆಯಿಂದಲೂ ಮಗು ಅಳುವುದು ಕೇಳುತ್ತಿತ್ತು. ಆದರೆ ಈಗ ಕೇಳಿಸುತ್ತಿಲ್ಲ. ಆದರೆ ಮಗು ಸುರಕ್ಷಿತವಾಗಿದೆ, ಉಸಿರಾಡುತ್ತಿದೆ ಎಂಬ ನಂಬಿಕೆ ನಮಗೆ ಇದೆ ಎಂದು ರಕ್ಷಣಾ ಅಧಿಕಾರಿಗಳು ಹೇಳಿದ್ದಾರೆ.

ಕೊಳವೆಬಾವಿಯಲ್ಲಿ ಬಿದ್ದ ಮಗುವಿನ ಸುತ್ತ ತೇವವಾದ ಮಣ್ಣು ಸುತ್ತುವರಿದಿದೆ. ಹಾಗಾಗಿ ಅವನು ಯಾವ ಸ್ಥಿತಿಯಲ್ಲಿ ಇದ್ದಾನೆ ಎಂದು ಗೊತ್ತಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ರಾಜ್ಯ ವಿಪತ್ತು ನಿರ್ವಹಣಾ ಪಡೆಗಳೂ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿವೆ.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಸಿ.ವಿಜಯಭಾಸ್ಕರ್​ ಅವರು ಶುಕ್ರವಾರ ರಾತ್ರಿಯಿಂದಲೂ ಸ್ಥಳದಲ್ಲೇ ಇದ್ದಾರೆ.