ವಿವೇಕಾನಂದ ಕಾನೂನು ಕಾಲೇಜಿನ ಕಾನೂನು ನೆರವು ಘಟಕದ ವತಿಯಿಂದ, ಕಾನೂನು ಅರಿವು ಕಾರ್ಯಕ್ರಮವು ಕಾನೂನು ಕಾಲೇಜಿನ ಸಭಾಂಗಣದಲ್ಲಿ ಜರಗಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪುತ್ತೂರಿನ ವಕೀಲರಾದ, ಶ್ರೀ ಸೂರ್ಯ ನಾರಾಯಣ ಎನ್. ಕೆ. ಮಾತನಾಡಿದ. ಅವರು, “ಕಾನೂನಿನ ಅರಿವು ಎಲ್ಲರಿಗೂ ಅತ್ಯಗತ್ಯ. ಆದ್ದರಿಂದ ನಮ್ಮ ಸಂವಿಧಾನದಲ್ಲಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದವರು, ಉಚಿತ ಕಾನೂನಿನ ನೆರವು ಪಡೆಯಲು ಆರ್ಹರು ಎಂದು ಹೇಳಲಾಗಿದೆ. ಇದಕ್ಕಾಗಿ ನ್ಯಾಯಾಲಯಗಳಲ್ಲಿ ಉಚಿತ ಕಾನೂನು ನೆರವು ಘಟಕಗಳನ್ನು ರಚಿಸಲಾಗಿದೆ. ಆದರೆ ಆರ್ಹರು ಮಾತ್ರ ಇದರ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ವಿವೇಕಾನಂದ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಅಕ್ಷತಾ ಎ. ಪಿ., ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾನೂನು ನೆರವು ಘಟಕದ ಸಂಯೋಜಕರಾದ ಶ್ರೀಮತಿ ಸಂಗೀತಾ ಎಸ್. ಎಂ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಜಗದೀಶ್ ಸ್ವಾಗತಿಸಿ, ಸಿಂಧು ಬಿ. ವಂದಿಸಿದರು. ದೀಪೆನ್ ಉಪ್ರೆಟ್ಟಿ ಕಾರ್ಯಕ್ರಮ ನಿರೂಪಿಸಿದರು.