Saturday, November 23, 2024
ಸುದ್ದಿ

ಬೋರ್ ವೆಲ್‍ಗೆ ಬಿದ್ದ ಎರಡು ವರ್ಷದ ಕಂದಮ್ಮ: 60 ಗಂಟೆಗಳ ನಿರಂತರ ಕಾರ್ಯಚರಣೆ-ಕಹಳೆ ನ್ಯೂಸ್

ಚೆನೈ ತಿರುಚಿನಾಪಳ್ಳಿ ಸಮೀಪ ಕೊಳವೆಬಾವಿಯಲ್ಲಿ ಬಿದ್ದಿರುವ ಎರಡು ವರ್ಷದ ಸುಜಿತ್ ರಕ್ಷಣೆಯ ಕಾರ್ಯಾಚರಣೆ ಮುಂದುವರೆದಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆಗಳು, ಅಗ್ನಿಶಾಮಕದಳ ಮತ್ತು ಇತರೆ ಸಂಸ್ಥೆಗಳು ಕಳೆದ 60 ಗಂಟೆಗಳಿಂದ ಮಗುವಿನ ರಕ್ಷಣೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕೊಳವೆಬಾವಿಗೆ ಆಕಸ್ಮಿಕವಾಗಿ ಬಿದ್ದಿರುವ ಸುಜಿತ್ 70 ಅಡಿ ಆಳದಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ. ಇನ್ನೂ ಸುಜಿತ್ ರಕ್ಷಿಸುವ ಕಾರ್ಯಾಚರಣೆ ಮುಂದುವರೆದಿದ್ದು, ಮಧುರೈಯ ಎಂಜಿನಿಯರ್ ವಿನ್ಯಾಸಗೊಳಿಸಿದ ವಿಶೇಷ ಸಾಧನ ಬಳಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶನಿವಾರ ಬೆಳಗ್ಗೆ ಕೊಳವೆಬಾವಿಯಿಂದ ಮಗುವನ್ನು 20 ಅಡಿಗಳವರೆಗೆ ಮೇಲಕ್ಕೆ ಎತ್ತಲಾಗಿತ್ತು. ಈ ವೇಳೆ ನಿಯಂತ್ರಣ ತಪ್ಪಿ ಕೆಳಗೆ ಕುಸಿದು 70 ಅಡಿ ಆಳದಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿಲಿಂಡರ್ ಮೂಲಕ ಮಗುವಿಗೆ ನಿರಂತರವಾಗಿ ಅಮ್ಲಜನಕ ಪೂರೈಕೆ ಮಾಡುತ್ತಿದ್ದು ಸುಜಿತ್ ಉಸಿರಾಡುತ್ತಿದ್ದಾನೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಘಟನಾ ಸ್ಥಳದಲ್ಲಿ ಸಚಿವರಾದ ಸಿ.ವಿಜಯಭಾಸ್ಕರ್ ಮತ್ತು ವೆಲ್ಲಮಂಡಿ ಎಂ.ನಟರಾಜನ್ ಮೊಕ್ಕಾಂ ಬೇಟಿ ನೀಡಿ ರಕ್ಷಣಾ ಕಾರ್ಯಚರಣೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಇನ್ನೂ ಮಗುವನ್ನು ಜೀವಂತವಾಗಿ ಹೊರತೆಗೆಯುವ ಎಲ್ಲ ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದು ಆರೋಗ್ಯ ಸಚಿವ ವಿಜಯಮ ಭಾಸ್ಕರ್ ಹೇಳಿದ್ದಾರೆ.