Recent Posts

Monday, January 20, 2025
ಸುದ್ದಿ

ಬಂಗಾರ ತುಂಬಿದ್ದ ಬ್ಯಾಗ್ ಕೊನೆಗೂ ಸಿಕ್ತು-ಕಹಳೆ ನ್ಯೂಸ್

ಬಂಗಾರದ ಆಭರಣ ತುಂಬಿದ್ದ ಬ್ಯಾಗ್ ಕಳೆದುಕೊಂಡಿದ್ದ ಪುಣೆ ದಂಪತಿಗೆ ಪೊಲೀಸರು ಖುಷಿ ಸುದ್ದಿ ನೀಡಿದ್ದಾರೆ. ಕೆಲವೇ ಗಂಟೆಗಳಲ್ಲಿ ದಂಪತಿ ಕೈಗೆ ಕಳೆದು ಹೋಗಿದ್ದ ಬ್ಯಾಗ್ ಸಿಗುವಂತೆ ಮಾಡಿದ್ದಾರೆ. ಪೊಲೀಸ್ ಕೆಲಸಕ್ಕೆ ಧನ್ಯವಾದ ಹೇಳಿದ ದಂಪತಿ ನಿಟ್ಟುಸಿರು ಬಿಟ್ಟಿದ್ದಾರೆ.

ಜಾಗೃತಿ ಹಾಗೂ ಆಕೆ ಪತಿ ರವೀಂದ್ರ ಭಾನುವಾರ ರಾತ್ರಿ ಮುಂಬೈನಿಂದ ಪುಣೆಗೆ ಬಂದಿದ್ದರಂತೆ. ರೈಲ್ವೆ ನಿಲ್ದಾಣದಿಂದ ಆಟೋ ಹಿಡಿದು ಮನೆಗೆ ಬಂದಿದ್ದಾರೆ. ಮನೆಗೆ ಬಂದ್ಮೇಲೆ ಬಂಗಾರ ತುಂಬಿದ್ದ ಬ್ಯಾಗ್ ಮನೆಗೆ ಬಂದಿಲ್ಲ ಎಂಬುದು ಗೊತ್ತಾಗಿದೆ. ಇದ್ರಿಂದ ದಂಗಾದ ದಂಪತಿ ಪೊಲೀಸರಿಗೆ ದೂರು ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸೋಮವಾರ ಬೆಳಿಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ದಂಪತಿಗೆ ಭರವಸೆ ನೀಡಿದ್ದಾರೆ. ನಾಲ್ಕು ಪ್ರತ್ಯೇಕ ತಂಡಗಳನ್ನು ರಚಿಸಿ ಹುಡುಕಾಟ ಶುರು ಮಾಡಿದ್ದಾರೆ. ಸಿಸಿ ಟಿವಿ ಆಧಾರದ ಮೇಲೆ ರಿಕ್ಷಾ ಚಾಲಕನ ನಂಬರ್ ಪತ್ತೆ ಮಾಡಿದ್ದಾರೆ. ರಿಕ್ಷಾ ಸೀಟಿನ ಹಿಂದೆ ನೋಡಿದಾಗ ಅಲ್ಲಿ ಬ್ಯಾಗ್ ಇರುವುದು ಕಂಡು ಬಂದಿದೆ. ಇದ್ರಿಂದ ಖುಷಿಗೊಂಡ ದಂಪತಿ ರಿಕ್ಷಾ ಚಾಲಕನಿಗೆ 500 ರೂಪಾಯಿ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು