Recent Posts

Monday, January 20, 2025
ಕ್ರೀಡೆ

ಓಜಾಲ ಶ್ರೀವಾಸುಕೀ ಸ್ಪೋಟ್ರ್ಸ್ ಕ್ಲಬ್‍ನ ನೂತನ ಕಟ್ಟಡ ಉದ್ಘಾಟನೆ ಪುರುಷರ ಮುಕ್ತ ಕಬಡ್ಡಿ ಪಂದ್ಯಾಟ-ಕಹಳೆ ನ್ಯೂಸ್

ಪುತ್ತೂರು: ಕೊಡಿಪ್ಪಾಡಿ ಓಜಾಲ ಶ್ರೀವಾಸುಕೀ ಸ್ಪೋರ್ಟ್ ಕ್ಲಬ್‍ನ ನೂತನ ಕಟ್ಟಡದ ಉದ್ಘಾಟನೆ ನವೆಂರ್ 3ರಂದು ನಡೆಯಲಿದೆ. ಕೋಡಿಂಬಾಡಿ ರೈ ಎಸ್ಟೇಟ್‍ನ ಅಶೋಕ್ ರೈ ಕೋಡಿಂಬಾಡಿ ಉದ್ಘಾಟಿಸಲಿದ್ದಾರೆ. ನಿವೃತ್ತ ಅರಣ್ಯಾಧಿಕಾರಿ ಹಾಗೂ ಓಜಾಲ ವಾಸುಕೀ ಸೇವಾ ಸಮಿತಿ ಮಾಜಿ ಅಧ್ಯಕ್ಷ ನಾರಾಯಣ ಶೆಟ್ಟಿ ಪಾಂಡೇಲುಗುತ್ತು ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ. ಓಜಾಲ ಶಾಲಾ ಮುಖ್ಯ ಶಿಕ್ಷಕಿ ವಿಲ್ಮಾ ಸಿಕ್ವೇರಾರವರಿಗೆ ಸನ್ಮಾನ ನಡೆಯಲಿದೆ. ಪುರುಷರಿಗೆ, ಮಹಿಳೆಯರಿಗೆ ಹಾಗೂ ಅಂಗನವಾಡಿ ಮಕ್ಕಳಿಗೆ ಆಟೋಟ ಜರಗಲಿದೆ.

ಕಬ್ಬಡ್ಡಿ ಪಂದ್ಯಾಟ: ನೂತನ ಕಟ್ಟಡ ಉದ್ಘಾಟನೆ ಪ್ರಯುಕ್ತ ದಿ.ಮೋನಪ್ಪ ನಾಯ್ಕ್ ಓಜಾಲ ಇವರ ಸ್ಮರಣಾರ್ಥ ಪುರುಷರ ಮುಕ್ತ ಕಬ್ಬಡ್ಡಿ ಪಂದ್ಯಾಟ ಬೆಳಿಗ್ಗೆ 11.ಗಂಟೆಗೆ ಜರುಗಲಿದೆ. ಪ್ರವೆಶ್ ಶುಲ್ಕ ರೂ .300 ಆಗಿರುತ್ತದೆ. ಪ್ರಥಮ ಬಹುಮಾನ ರೂ.4004 ಹಾಗೂ ಶ್ರೀವಾಸುಕಿ ಟ್ರೋಫಿ, ದ್ವಿತೀಯ ಬಹುಮಾನ ರೂ3003 ಹಾಗೂ ಶ್ರಿವಾಸುಕಿ ಟ್ರೋಫಿ , ತೃತೀಯ ಬಹುಮಾನ, ಹಾಗೂ ರೂ.1501 ಹಾಗೂ ಶ್ರೀ ವಾಸುಕಿ ಟ್ರೋಫಿ, ಚತುರ್ಥ ಬಹುಮಾನ ರೂ.1501 ಹಾಗೂ ಶ್ರೀವಾಸುಕಿ ಟ್ರೋಫಿ ಅಲ್ಲದೇ ಉತ್ತಮ ದಾಳಿಗಾರ, ಉತ್ತಮ ಹಿಡಿತಗಾರ ಹಾಗೂ ಸವ್ಯಸಾಚಿ ಬಹುಮಾನ ನೀಡಲಾಗುವುದು ಎಂದು ಪ್ರಕಟನೆ ತಿಳಿಸಿದೆ

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು