Recent Posts

Monday, January 20, 2025
ರಾಜಕೀಯ

ಪಾಂಡೇಶ್ವರ ವಾರ್ಡ ನ ಟಿಕೆಟ್ ಆಕಾಂಕ್ಷಿ ಮಸಾಜ್ ಪಾರ್ಲರ್ ಭಾಸ್ಕರ್ ಗೆ ಕೈ ಪಾಳಯದ ಟಿಕೆಟ್ ಪಕ್ಕಾ ; ಕಾಂಗ್ರೆಸ್ನ ಕೆಡ್ಡಾವನ್ನಾ ತಾನೆ ತೊಡಿಕೊಳ್ಳುತ್ತಾ..? ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕೈ ಸೋಲುತ್ತಾ..? – ಕಹಳೆ ನ್ಯೂಸ್

ಮಂಗಳೂರು ; ಮಹಾನಗರ ಪಾಲಿಕೆ ಚುನಾವಣಾ ಕಾವು ರಂಗೇರುತ್ತಿದ್ದು ದಿನಗಣನೆ ಆರಂಭವಾಗಿದೆ. ಈಗಾಗಲೇ ಬಿಜೆಪಿ ಪಾಳಯದಲ್ಲಿ ಅಭ್ಯರ್ಥಿಗಳ ಪಟ್ಟಿ ಘೋಷಣೆಯಾಗಿದೆ. ಕೈ ಪಾಳಯದಲ್ಲಿ ಅಭ್ಯರ್ಥಿಗಳ ಪಟ್ಟಿ ಘೋಷಣೆಯಾಗುವುದು ಬಾಕಿ ಇದ್ದು ಇಂದು ನಾಳೆ ಟಿಕೆಟ್ ಪಕ್ಕಾ ಆಗುವ ನಿರೀಕ್ಷೆ ಇದೆ.

ನಗರ ಪಾಲಿಕೆಯ ಪ್ರತಿಷ್ಠಿತ ಕಣವಾದ ಪಾಂಡೇಶ್ವರ ಅತ್ತಾವರ ೪೬ ನೇ ಕಂಟೋನ್ಮೆಂಟ್ ವಾರ್ಡ್ ನ ಟಿಕೆಟ್ ಆಕಾಂಕ್ಷಿ ಭಾಸ್ಕರ್ ರಾವ್ ಗೆ ಟಿಕೆಟ್ ಪಕ್ಕಾ ಆಗುತ್ತಾ ಅನ್ನೋ ಮಾಹಿತಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಸೌಹಾರ್ದ ಸೊಸೈಟಿ ಬ್ಯಾಂಕ್ ನಡೆಸುತ್ತಿರುವ ಭಾಸ್ಕರ್ ಈ ಹಿಂದೆ ಅಂದರೆ ಸುಮಾರು ೬ ತಿಂಗಳ ಹಿಂದೆ ಮಸಾಜ್ ಪಾರ್ಲರ್ ನಡೆಸುತ್ತಿದ್ದ ವಿಚಾರ ಬೆಳಕಿಗೆ ಬಂದಿದ್ದು ರೈಡ್ ಕೂಡ ಆಗಿದೆ. ನಂದಿಗುಡ್ಡ ದಲ್ಲಿ ಆದ ಈ ಘಟನೆ ಜನರ ಮನಸ್ಸಿನಲ್ಲಿ ಇನ್ನು ಹಸಿಯಾಗಿ ಉಳಿದುಕೊಂಡಿದೆ.
ಈ ಹಿಂದೆ ಬಿಜೆಪಿಯಲ್ಲಿ ಇದ್ದ ಭಾಸ್ಕರ್ ಕಮಲ ಪಾಳಯದ ಜೆಪ್ಪು ವಾರ್ಡ್ ನ ಕಾರ್ಪೊರೇಟರ್ ಆಗಿ ಆಯ್ಕೆಯಾಗಿದ್ದ. ನಂತರ ಬಿಜೆಪಿಯಿಂದ ಕಾಂಗ್ರೆಸ್ ಗೆ ಜಿಗಿದ ಭಾಸ್ಕರ್ ಪಾಂಡೇಶ್ವರ ವಾರ್ಡ ನ ಟಿಕೆಟ್ ಆಕಾಂಕ್ಷಿ ಆಗಿದ್ದಾರೆ.
ಎದುರಾಳಿ ಬಿಜೆಪಿ ಪಾಳಯದ ದಿವಾಕರ್ ಹಾಗೂ ಭಾಸ್ಕರ್ ಒಂದೇ ಸಮೂದಾಯದವರಾಗಿದ್ದು ರಾಮಕ್ಷತ್ರೀಯ ಓಟ್ ಬ್ಯಾಂಕ್ ಒಡೆದು ಹೋಗುವ ಭೀತಿ ಕೈ ಕಾರ್ಯಕರ್ತ ರಲ್ಲಿ ಉಂಟಾಗಿದೆ.ಇನ್ನು ಭಾಸ್ಕರ್ ಬಿಜೆಪಿ ಪಾಳಯದಲ್ಲಿ ಗುರುತಿಸಿಕೊಂಡಿದ್ದರಿಂದ ಎದುರಾಳಿ ಅಭ್ಯರ್ಥಿಗೆ ಪರೋಕ್ಷವಾಗಿ ಚುನಾವಣೆ ಗೆಲ್ಲಿಸುವ ತಂತ್ರ ರಚಿಸಿರಬಹುದೆ ಎನ್ನುವ ಸಂಶಯಗಳು ವ್ಯಕ್ತವಾಗಿದೆ.


ಒಂದಮ್ಮೊ ಕಾಂಗ್ರೆಸ್ ಇತನಿಗೆ ಟಿಕೆಟ್ ನೀಡಿದರೆ ಕೈ ಪಾಳಯದ ಕಾರ್ಯಕರ್ತರಲ್ಲಿ ವೈಮನಸ್ಸು ಉಂಟಾಗಿ ಪಾಂಡೇಶ್ವರ ವಾರ್ಡ್ ನಲ್ಲಿ ಕಾಂಗ್ರೆಸ್ ನೆಲಕಚ್ಚುವುದು ಖಚಿತವಾಗಿದೆ.

ವರದಿ : ಏಜೆನ್ಸಿ