Recent Posts

Monday, January 20, 2025
ಸುದ್ದಿ

ಜಮ್ಮು-ಕಾಶ್ಮೀರ ಇಂದಿನಿಂದ ಕೇಂದ್ರಾಡಳಿತ ಪ್ರದೇಶ-ಕಹಳೆ ನ್ಯೂಸ್

ನವದೆಹಲಿ:ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಸಂವಿಧಾನ ವಿಧಿ 370ನ್ನು ತೆಗೆದುಹಾಕಿದ 86 ದಿನಗಳ ನಂತರ ರಾಜ್ಯದ ಸ್ಥಾನಮಾನ ಕಳೆದುಕೊಂಡಿದ್ದು, ಕೇಂದ್ರಾಡಳಿತ ಪ್ರದೇಶಗಳಾಗಿ ಬದಲಾಗಿದೆ.

ಜಮ್ಮು- ಕಾಶ್ಮೀರ ಶಾಸನಸಭೆ ಸಹಿತ ಮತ್ತು ಲಡಾಖ್ ಭಾಗವು ಶಾಸನಸಭೆ ರಹಿತ ಕೇಂದ್ರಾಡಳಿತ ಪ್ರದೇಶಗಳಾಗಿವೆ. ಲಡಾಖ್ ಯಾವುದೇ ವಿಧಾನಸಭೆ ಹೊಂದಿರುವುದಿಲ್ಲ. ನೇರವಾಗಿ ಕೇಂದ್ರ ಗೃಹ ಸಚಿವಾಲಯದ ಅಧೀನಕ್ಕೆ ಒಳಪಟ್ಟಿರುತ್ತದೆ. ಜಮ್ಮು- ಕಾಶ್ಮೀರದಲ್ಲಿ ದೆಹಲಿ ಮಾದರಿಯಲ್ಲಿ ವಿಧಾನಸಭೆ ಇರಲಿದೆ. ಆದರೆ, ಚುನಾವಣೆ ನಡೆಯುವವರೆಗೂ ರಾಷ್ಟ್ರಪತಿ ಆಡಳಿತ ಮುಂದುವರಿಯಲಿದೆ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಮ್ಮು- ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಆಗಿ ಗುಜರಾತ್​ನ ಮಾಜಿ ಹಿರಿಯ ಅಧಿಕಾರಿ ಜಿ.ಸಿ.ಮುಮು ಮತ್ತು ಲಡಾಖ್​ನ ಲೆಫ್ಟಿನೆಂಟ್ ಗವರ್ನರ್ ಆಗಿ ನಿವೃತ್ತ ಅಧಿಕಾರಿ ರಾಧಾಕೃಷ್ಣ ಮಾಥುರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಜಮ್ಮು- ಕಾಶ್ಮೀರ ಹಾಗೂ ಲಡಾಖ್ ಎರಡಕ್ಕೂ ಒಂದೇ ಹೈಕೋರ್ಟ್ ಇರಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆರ್ಟಿಕಲ್ 370 ರದ್ದು ಬಳಿಕ ಪರಿಸ್ಥಿತಿ ಅವಲೋಕನಕ್ಕಾಗಿ ಬಂದಿದ್ದ ಯುರೋಪ್‌ ಒಕ್ಕೂಟದ ಸಂಸದರ ನಿಯೋಗ ಎರಡು ದಿನಗಳ ಕಾಲ ಜಮ್ಮು-ಕಾಶ್ಮೀರ ಸುತ್ತಾಡಿತು. ವಿವಿಧ ಭಾಗಗಳಿಗೆ ಭೇಟಿ ನೀಡಿದ ಬಳಿಕ ಅಭಿಪ್ರಾಯ ಹಂಚಿಕೊಂಡ ನಿಯೋಗ, 370ನೇ ವಿಧಿ ರದ್ದು ದೇಶದ ಆಂತರಿಕ ವಿಚಾರವಾಗಿದ್ದು, ಇದಕ್ಕೆ ನಮ್ಮ ಬೆಂಬಲ ಇದೆ ಎಂದಿದೆ.