Saturday, November 23, 2024
ರಾಜಕೀಯ

ಪಿಎಫ್ಐ ಸಂಘಟನೆ ನಿಷೇಧಕ್ಕೆ ಆಗ್ರಹಿಸಿ ಇಂದು ಕೆಆರ್ ಪೇಟೆ ಬಂದ್ – ಕಹಳೆ ನ್ಯೂಸ್

ಮಂಡ್ಯ(ಅ. 31): ಶಂಕಿತ ಉಗ್ರ ಸಂಘಟನೆಯಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಇಂದು ಹಿಂದೂಪರ ಸಂಘಟನೆಗಳು ಕೆಆರ್ ಪೇಟೆ ಬಂದ್​ಗೆ ಕರೆ ನೀಡಿವೆ. ಕೆಆರ್ ಪೇಟೆ ತಾಲೂಕಿನಲ್ಲಿ ಇತ್ತೀಚೆಗೆ ಪಿಎಫ್​ಐ ಸಂಘಟನೆಯ ಕಾರ್ಯಕರ್ತರು ಪೆರೇಡ್ ನಡೆಸಿದ್ದು ಬೆಳಕಿಗೆ ಬಂದ  ಹಿನ್ನೆಲೆಯಲ್ಲಿ ಈ ಬಂದ್ ನಡೆಸಲಾಗುತ್ತಿದೆ. ತಾಲೂಕ ಬೆಳಗ್ಗೆ 10ಕ್ಕೆ ಪ್ರಾರಂಭವಾಗಿರುವ ಬಂದ್ ಸಂಜೆ 4ರವರೆಗೂ ನಡೆಯಲಿದೆ.

ಹಿಂದೂಪರ ಸಂಘಟನೆಗಳ ಬಂದ್ ಕರೆಗೆ ಕೆಲ ಸ್ವಾಮೀಜಿಗಳೂ ಬೆಂಬಲ ನೀಡಿದ್ದಾರೆ. ಬಾಳೆಹೊನ್ನೂರು ಶಾಖಾ ಮಠದ ಗಂಗಾಧರೇಶ್ವರ ಶಿವಾಚಾರ್ಯ ಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಕೆಆರ್ ಪೇಟೆಯ ಪ್ರವಾಸಿ ಮಂದಿರ ಸ್ಕಲ್ ಬಳಿ ಮಾನವ ಸರಪಳಿ ರಚಿಸಿ ಪ್ರತಿಭಟನಾಕಾರರು ಆಕ್ರೋ ವ್ಯಕ್ತಪಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು, ಕೆಆರ್ ಪೇಟೆಯಲ್ಲಿ ಬಂದ್​ಗೆ ಬೆಂಬಲವಾಗಿ ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಮುಚ್ಚಲಾಗಿದೆ. ಆಟೋ, ವಾಹನಗಳ ಸಂಚಾರ ಇಲ್ಲದೇ ಕೆಆರ್ ಪೇಟೆ ಬಹುತೇಕ ನಿರ್ಜನಗೊಂಡಿದೆ ಎಂಬ ಮಾಹಿತಿ ತಿಳಿದುಬಂದಿದೆ. ಆದರೆ, ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ಪ್ರತಿಭಟನಾಕಾರರು ಅಡ್ಡಿಪಡಿಸಿಲ್ಲ. ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ತಾಲೂಕಿನಾದ್ಯಂತ ಬೈಕ್ ರ್ಯಾಲಿ ನಡೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೆಆರ್ ಪೇಟೆ ಸಮೀಪ ಪೆರೇಡ್ ನಡೆಸುತ್ತಿದ್ದ ಪಿಎಫ್​ಐ ಸಂಘಟನೆಗೆ ಸೇರಿದರೆನ್ನಲಾದ 13 ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಶಂಕಿತರ ವಿರುದ್ಧ ಕ್ರಮ ಕೈಗೊಳ್ಳಬೇಕು. ಪಿಎಫ್​ಐ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧಿಸಬೇಕು ಎಂಬುದು ಪ್ರತಿಭಟನಾಕಾರರ ಒತ್ತಾಯವಾಗಿದೆ.