Recent Posts

Sunday, January 19, 2025
ಸುದ್ದಿ

Breaking News : ಮತ್ತೆ ಎರಡು ದಿನ ಕರಾವಳಿಯಲ್ಲಿ ಮಹಾ ಚಂಡಮಾರುತದ ಭೀತಿ ; ಹವಾಮಾನ ಇಲಾಖೆಯಿಂದ ಮುನ್ನೆಚ್ಚರಿಕೆ – ಭಾರೀ ಕಟ್ಟೆಚ್ಚರ – ಕಹಳೆ ನ್ಯೂಸ್

ಮಂಗಳೂರು, ಅ 31 : ಕಳೆದ ವಾರವಷ್ಟೇ ಕ್ಯಾರ್ ಚಂಡ ಮಾರುತದ ಪರಿಣಾಮದಿಂದ ಭಾರೀ ಗಾಳಿ ಮಳೆಯನ್ನು ಎದುರಿಸಿದ್ದ ಕರಾವಳಿಯಲ್ಲಿ ಮತ್ತೆ ಮಳೆರಾಯ ಆರ್ಭಟಿಸಲು ರೆಡಿಯಾಗಿದ್ದಾನೆ. ನವಂಬರ್ 01ರ ತನಕ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇನ್ನು ಕಳೆದ ವಾರ ಕ್ಯಾರ್ ಚಂಡಮಾರುತದ ಪ್ರಭಾವ ಕರಾವಳಿಗೆ ತಟ್ಟಿತ್ತು. ಇದರಿಂದಾಗಿ ಕರಾವಳಿ ಜಿಲ್ಲೆಗಳಲ್ಲಿ ನಿರಂತರ ಮಳೆಯಾಗಿತ್ತು. ಮಾತ್ರವಲ್ಲದೆ, ಭಾರೀ ಗಾಳಿ ಮಳೆಯಿಂದಾಗಿ ಜನತೆ ಕಂಗೆಟ್ಟಿದ್ದರು. ಆದರೆ, ಇದೀಗ ಮತ್ತೆ ಕರಾವಳಿಯಲ್ಲಿ ಮತ್ತೊಂದು ಚಂಡ ಮಾರುತದ ಭೀತಿ ಎದುರಾಗಿದೆ. ಮತ್ತೊಂದು ಮಹಾ ಚಂಡಮಾರುತ ಅಪ್ಪಳಿಸುವ ಭೀತಿ ಎದುರಾಗಿದ್ದು, ಮತ್ತೆ ಭಾರೀ ಮಳೆಯಾಗುವ ಸಾಧ್ಯತೆ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಚಂಡಮಾರುತದ ಭೀತಿ ಹಿನ್ನೆಲೆಯಲ್ಲಿ ಕರಾವಳಿ ಪ್ರದೇಶಗಳಲ್ಲಿ ಸಮುದ್ರ ಪ್ರಕ್ಷುಬ್ದಗೊಳ್ಳಲಿದ್ದು, ಮೀನುಗಾರರು ಎಚ್ಚರಿಕೆ ವಹಿಸುವಂತೆ ಇಲಾಖೆ ಸೂಚಿಸಿದೆ. ಮೀನುಗಾರರು ಸಮುದ್ರಕ್ಕೆ ತೆರಳದಂತೆ ಎಚ್ಚರಿಕೆಯನ್ನು ಕೂಡ ನೀಡಲಾಗಿದೆ. ಅಲ್ಲದೆ, ಕರಾವಳಿ ಭಾಗದ ಎಲ್ಲಾ ಜಿಲ್ಲೆಗಳ ಜನತೆ ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತಗಳು ಸೂಚನೆ ನೀಡಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು