Sunday, January 19, 2025
ಸಿನಿಮಾ

ವಿವಾದಲ್ಲಿ ಸಿಲುಕಿದ ಹಾಟ್ ಬೆಡಗಿ ಪೋರ್ನ್ ಸ್ಟಾರ್ ಸನ್ನಿ ಲಿಯೋನ್ ; ವಿಷಯ ಏನು ಗೊತ್ತೇ?

ಮುಂಬೈ: ನಟಿ ಸನ್ನಿ ಲಿಯೋನ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ವ್ಯಕ್ತವಾಗತೊಡಗಿದೆ. 

ಆಗಿದ್ದಿಷ್ಟೇ…..  ಕ್ಯಾನ್ಸರ್ ರೋಗಿಗಳಿಗೆ ಆರ್ಥಿಕ ಸಹಾಯ ಮಾಡುವ ಉದ್ದೇಶದಿಂದ ಸನ್ನಿಲಿಯೋನ್ ಬಣ್ಣಗಳಿಂದ ತುಂಬಿದ ಕಲಾಕೃತಿಯನ್ನು ಹರಾಜು ಮಾಡುವುದಕ್ಕೆ ಇಟ್ಟಿದ್ದರು. ಇದನ್ನು ಗಮನಿಸಿದ ಡಯೆಟ್ಸಬ್ಯಾ ಎಂಬ ಇನ್ಸ್ಟಾಗ್ರಾಮ್ ಖಾತೆದಾರರು, ಇದು ಫ್ರಾನ್ಸ್ ನ ಸಚಿತ್ರಕಾರ ಮಲಿಕಾ ಫಾವ್ರೆ ಅವರ ಕೃತಿಚೌರ್ಯ ಎಂಬ ಆಕ್ಷೇಪ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೇ ಕೃತಿ ಚೌರ್ಯ ಮಾಡಲಾಗಿದೆ ಎನ್ನಲಾದ ಮೂಲ ಕಲಾಕೃತಿಯ ಫೋಟೋವನ್ನು ಸನ್ನಿಲಿಯೋನ್ ತಯಾರಿಸಿದ್ದ ಕಲಾಕೃತಿ ಪಕ್ಕದಲ್ಲೇ ಹಾಕಿ ಗಮನಸೆಳೆದಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನಾವೆಲ್ಲರೂ ಆರ್ಥಿಕ ಸಹಾಯ ಮಾಡುವ ಉದ್ದೇಶದ ಜೊತೆಗಿದ್ದೇವೆ. ಆದರೆ ಅದಕ್ಕಾಗಿ ಇನ್ನೊಬ್ಬರ ಕೃತಿಯನ್ನು ನಕಲು ಮಾಡಿ ಅವರ ಹೆಸರನ್ನೂ ಉಲ್ಲೇಖ ಮಾಡದೇ ಇರುವುದು ಕೆಟ್ಟದ್ದು ಎಂದು ಹೇಳಿದ್ದರು. ಈ ಇನ್ಸ್ಟಾಗ್ರಾಮ್ ಖಾತೆಯ ಪೋಸ್ಟ್ ಗೆ ಸನ್ನಿಲಿಯೋನ್ ಪ್ರತಿಕ್ರಿಯೆ ನೀಡಿದ್ದು, ತಾನು ಕೃತಿಚೌರ್ಯ ಮಾಡಿಲ್ಲ. ಆದರೆ ತನಗೆ ಬೇರೊಬ್ಬರು ಫೋಟೋಗ್ರಾಫ್ ನ್ನು ನೀಡಿದ್ದರು. ಅದರ ಮೂಲಕವಾಗಿ ತಾನು ಚಿತ್ರಕಲೆಯನ್ನು ತಯಾರಿಸಿರುವುದಾಗಿ ಸಮರ್ಥಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಅದು ತನ್ನದೆಂದು ಎಲ್ಲಿಯೂ ಹೇಳಿಕೊಂಡಿಲ್ಲ.

ನಾನು ಚಿತ್ರಕಲೆಯನ್ನಷ್ಟೇ ತಯಾರಿಸಿದ್ದೇನೆ ಹಾಗೂ ಈ ಚಿತ್ರಕಲೆ ಮಾರಾಟವಾಗಿ ಅದರಿಂದ ಬರುವ ಹಣವನ್ನು ದಾನ ಮಾಡುತ್ತಿರುವುದರಿಂದ ಇದು ಅಭಿನಂದನೆಗೆ ಅರ್ಹವಾದದ್ದು ಎಂದು ಭಾವಿಸಬೇಕೆಂದು ಹೇಳಿದ್ದಾರೆ.

ಸನ್ನಿ ಲಿಯೋನ್ ಪ್ರತಿಕ್ರಿಯೆ ಬಂದ ಬಳಿಕ ಡಯೆಟ್ಸಬ್ಯಾ ಎಂಬ ಇನ್ಸ್ಟಾಗ್ರಾಮ್ ಖಾತೆದಾರರು ಮಲಿಕಾ ಫಾವ್ರೆ ಅವರ ಪ್ರತಿಕ್ರಿಯೆಯನ್ನೂ ಉಲ್ಲೇಖಿಸಿದ್ದಾರೆ.

ಫಾವ್ರೆ ಅವರ ಪ್ರತಿಕ್ರಿಯೆ ಹೀಗಿದೆ: ಸನ್ನಿ ಲಿಯೋನ್ ಕನಿಷ್ಟ ಹೆಸರನ್ನಾದರೂ ಉಲ್ಲೇಖಿಸಬೇಕಿತ್ತು. ಬೌದ್ಧಿಕ ಆಸ್ತಿಯ ಬಗ್ಗೆ ಉಲ್ಲೇಖಿಸಿವುದು ನಿಮಗೆ ತಿಳಿದಿಲ್ಲವೇ? ಒಂದು ವೇಳೆ ನೀವು ನನ್ನ ಕೃತಿಯನ್ನು ನಕಲು ಮಾಡಿ ಅದನ್ನು ಹರಾಜು ಹಾಕುವುದು ನನಗೆ ಇಷ್ಟವಿಲ್ಲದೇ ಇದ್ದರೆ? ನಿಮ್ಮ ಉದ್ದೇಶ ಒಳ್ಳೆಯದಿರಬಹುದು ಆದರೆ ನಡೆ ಅಷ್ಟೊಂದು ಹಿತಕಾರಿಯಾಗಿಲ್ಲ” ಎಂದು ಹೇಳಿದ್ದಾರೆ.