ಬೆಂಗಳೂರು: ಬೆಂಗಳೂರಿನ ಸಿಂಧೂ ಗಂಗಾಧರನ್ ಜರ್ಮನಿಯ ದೈತ್ಯ ತಂತ್ರಜ್ಞಾನ ಸಂಸ್ಥೆಯಾಗಿರುವ ಸ್ಯಾಪ್ ಲ್ಯಾಬ್ಸ್ ಇಂಡಿಯಾದ ಮೊದಲ ಮಹಿಳಾ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
8 ಸಾವಿರಕ್ಕೂ ಹೆಚ್ಚು ತಂಡಗಳನ್ನು ಹೊಂದಿರುವ ಈ ಸಂಸ್ಥೆಯ ಮುಖ್ಯಸ್ಥೆಯಾಗಿ ಸೆಪ್ಟೆಂಬರ್ ತಿಂಗಳಿನಲ್ಲಿ ಅಧಿಕಾರ ಸ್ವೀಕರಿಸಿರುವ ಸಿಂಧೂ ಗಂಗಾಧರನ್, ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡಿದ್ದು, ಐಟಿಪಿಎಲ್ ನಲ್ಲಿದ್ದ ಸ್ಯಾಪ್ ಲ್ಯಾಬ್ಸ್ ಇಂಡಿಯಾ ಸಂಸ್ಥೆಯ ಮೂಲಕ 1999ರಲ್ಲಿ ವೃತ್ತಿಯನ್ನು ಆರಂಭಿಸಿದರು
ಉತ್ತಮ ರೀತಿಯಲ್ಲಿ ಸ್ವಯಂ ಪ್ರೇರಿತವಾಗಿ ಕಾರ್ಯನಿರ್ವಹಿಸಿದ್ದಲ್ಲಿ ಮುಖ್ಯಸ್ಥ ಸ್ಥಾನ ತಲುಪಬಹುದಾಗಿದೆ. ಲಿಂಗ ತಾರತಾಮ್ಯ ಸಲ್ಲದು. ಜರ್ಮನಿಯ ಜನರ ರೀತಿ ಬೆಂಗಳೂರಿನಲ್ಲಿಯೂ ಬೆಳೆಯಬಹುದು. ಇದನ್ನೇ ನಮ್ಮ ತಾಯಿ ನಿರೀಕ್ಷಿಸುತ್ತಿದ್ದರು. ಜೀವನದಲ್ಲಿ ಎಲ್ಲಾ ಅಶೋತ್ತರಗಳ ನಡುವೆ ಸಾಧನೆ ಕಡೆಗೆ ಗಮನ ಹರಿಸಬೇಕು ಎಂದು ಅವರು ಹೇಳುತ್ತಾರೆ.
18 ವರ್ಷಗಳ ಕಾಲ ಜರ್ಮನಿಯಲ್ಲಿದ್ದು ನಂತರ ಬೆಂಗಳೂರಿಗೆ ಬಂದಿರುವ ಸಿಂಧೂ ಗಂಗಾಧರನ್, ಜೀವನದ ಎಲ್ಲಾ ಹಂತಗಳನ್ನು ಖುಷಿಯಾಗಿ ಕಳೆದಿದ್ದು, ಅದರಿಂದ ಕಲಿತುಕೊಂಡಿರುವುದಾಗಿ ತಿಳಿಸಿದ್ದಾರೆ. ಕೆಲಸ ಹಾಗೂ ವೈಯಕ್ತಿಕ ಜೀವನದ ನಡುವೆ ಯಾವಾಗಲೂ ಸಮನ್ವಯತೆ ಕಾಪಾಡಿಕೊಳ್ಳಲಾಗಿತ್ತು. ಕೆಲಸ ಎಂಬುದು ಪ್ರತಿಯೊಬ್ಬರ ಜೀವನದಲ್ಲಿ ಮಹತ್ವಪೂರ್ಣವಾದ ಭಾಗವಾಗಿರುತ್ತದೆ ಎನ್ನುತ್ತಾರೆ.
2001ರಲ್ಲಿ ಜರ್ಮನಿಗೆ ತೆರಳಿದಾಗ ಪ್ರತಿಯೊಬ್ಬರು ಇಂಗ್ಲೀಷ್ ನಲ್ಲಿಯೇ ಮಾತನಾಡುತ್ತಿದ್ದರಿಂದ ಚರ್ಚೆಯ ವೇಳೆ ಸ್ಪಷ್ಟ ಯೋಚನೆ ಹೊಳೆಯುತಿತ್ತು. ಹೆರಿಗೆ ರಜೆಯ ಸಂದರ್ಭದಲ್ಲಿ ನನ್ನೊಂದಿಗೆ ಇಂಗ್ಲೀಷ್ ನಲ್ಲಿ ಮಾತನಾಡುತ್ತಿದ್ದರಿಂದ ಇಂಗ್ಲೀಷ್ ಭಾಷೆ ಕಲಿಕೆ ಸಾರಾಗವಾಯಿತು. ಗ್ರಾಹಕ ಕೇಂದ್ರಿತ ಒಲವು, ನಾಯಕತ್ವ ಚಿಂತನೆ ನಡುವೆ ಸಹಭಾಗಿತ್ವ ಮೂಡಿಸಲು ಗಮನ ಹರಿಸುತ್ತಿದ್ದಾಗಿ ಅವರು ಹೇಳಿದ್ದಾರೆ.