ಬೆಂಗಳೂರು: ಸ್ಯಾಂಡಲ್ ವುಡ್ ಕನಸುಗಾರ, “ಪ್ರೇಮಲೋಕ”ದ ಮೂಲಕ ಜಾದೂ ಮಾಡಿದ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಅವರೀಗ ಡಾ. ರವಿಚಂದ್ರನ್ ಆಗಿದ್ದಾರೆ.
ಸಿಎಂಆರ್ ಯೂನಿವರ್ಸಿಟಿ.ಸ್ಯಾಂಡಲ್ ವುಡ್ ನಟ, ನಿರ್ದೇಶಕ ರವಿಚಂದ್ರನ್ ಅವರಿಗೆ ಗೌರವ ಡಾಕ್ಟರೇಟ್ ನೀಡುತ್ತಿದೆ. ನವೆಂಬರ್ 3ರಂದು ನಡೆಯುವ ವಿಶ್ವವಿದ್ಯಾನಿಲಯದ ಕಾರ್ಯಕ್ರಮದಲ್ಲಿ ರವಿಚಂದ್ರನ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಪುರಸ್ಕರಿಸಲಾಗುತ್ತದೆ.
ಮೂರು ದಶಕಗಳಿಂದ ಚಿತ್ರರಂಗದಲ್ಲಿ ಹೊಸ ಪ್ರಯೋಗಗಳನ್ನು ಮಾಡುತ್ತಾ ನಾಯಕನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ಸ್ಯಾಂಡಲ್ ವುಡ್ ಕಿಂದರಿಜೋಗಿಗೆ ದಾಕ್ಟರೇಟ್ ದೊರಕಿರುವುದು ಅವರ ಅಭಿಮಾನಿಗಳಿಗೆ ಹಿಡಿಸಲಾಗದಷ್ಟು ಖುಷಿ ಕೊಟ್ಟಿದೆ.
ಕನ್ನಡ ಚಿತ್ರರಂಗದಲ್ಲಿ ವರನಟ ರಾಜ್‍ಕುಮಾರ್ ಮೊದಲ ಬಾರಿಗೆ ದಾಕ್ಟರೇಟ್ ಗೌರವಕ್ಕೆ ಪಾತ್ರರಾಗಿದ್ದರು. ಆ ನಂತರ ವಿಷ್ಣುವರ್ಧನ್, ಅಂಬರೀಶ್, ಶಿವರಾಜ್ ಕುಮಾರ್ ಸೇರಿ ಹಲವರಿಗೆ ಈ ಗೌರವ ಸಿಕ್ಕಿದೆ. ಇದೀಗ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಈ ಪುರಸ್ಕರಾ ದೊರಕಿರುವುದು ಚಿತ್ರರಂಗಕ್ಕೆ ಇನ್ನೊಂದು ಹೆಮ್ಮೆಯ ಗರಿ ಮೂಡಿಸಿದೆ.
ನಾದಬ್ರಹ್ಮ ಹಂಸಲೇಖಾ-ರವಿಚಂದ್ರನ್ ಜತೆಯಾಗಿ ನಿರ್ಮಿಸಿದ ಚಿತ್ರಗಳಲ್ಲಿ ಬಹುತೇಕ ಎಲ್ಲಾ ಚಿತ್ರಗಳೂ ಗಲ್ಲಾ ಪೆಟ್ಟಿಗೆಯಲ್ಲಿ ಯಶಸ್ವಿಯಾಗಿದೆ. ಇನ್ನು ಅವರ ಚಿತ್ರದ ಹಾಡುಗಳಂತೂ ಚಿತ್ರಸಂಗೀತಕ್ಕೆ ಹೊಸ ಆಯ್ಮವನ್ನೇ ನೀಡಿದವೆನ್ನಲು ಅಡ್ಡಿಯಿಲ್ಲ. “ಪ್ರೇಮಲೋಕದಿಂದ ಇತ್ತೀಚಿನ ಬಹುಕೋಟಿ ವೆಚ್ಚದ ಅದ್ದೂರಿ ಚಿತ್ರ “ಮುನಿರತ್ನ ಕುರುಕ್ಷೇತ್ರ”ವರೆಗೆ ರವಿಚಂದ್ರನ್ ಸಾಕಷ್ಟು ಯಶಸ್ವಿ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.