Monday, January 20, 2025
ಸುದ್ದಿ

ಮಂಗಳೂರಿನಲ್ಲಿ ಸಲೂನ್ ಮತ್ತು ಸ್ಪಾನಲ್ಲಿ ಹೆಸರಿನಲ್ಲಿ ವೇಶ್ಯಾವಾಟಿಕೆ – ಐವರು ಯುವತಿಯರ ರಕ್ಷಣೆ ; ದಂಧೆ ನಡೆಸುತ್ತಿದ್ದ ವಾಲಿದ್ ಖಾನ್ ಹಾಗೂ ಇಸ್ತಿಕಾರ್ ಬಂಧನ – ಕಹಳೆ ನ್ಯೂಸ್

ಮಂಗಳೂರು: ವೇಶ್ಯಾವಾಟಿಕೆ  ದಂಧೆಯಲ್ಲಿ ತೊಡಗಿಕೊಂಡಿದ್ದ ಇಬ್ಬರು ಪಿಂಪ್ ಗಳನ್ನು ಮಂಗಳೂರು ಪೋಲೀಸರು ಬಂಧಿಸಿದ್ದಾರೆ.

ನಗರದ ಸ್ಪಾ ಒಂದರಲ್ಲಿ ನಡೆಯುತ್ತಿದ್ದ ಈ ವೇಶ್ಯಾವಾಟಿಕೆ ಅಡ್ಡೆಯ ಮೇಲೆ ದಾಳಿ ನಡೆಸಿದ ಪೋಲೀಸರು ಐವರು ಯುವತಿಯರನ್ನು ರಕ್ಷಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಂಕನಾಡಿಯ ವಾಣಿಜ್ಯ ಸಂಕೀರ್ಣದಲ್ಲಿದ್ದ ಎಂಬಲ್ಲಿಸ್ ಸಲೂನ್ ಮತ್ತು ಸ್ಪಾನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಪಡೆದ ಕದ್ರಿ ಪೋಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಮಂಗಳೂರಿನವನೇ ಆದ ವಾಲಿದ್ ಖಾನ್ (34), ಹಾಗೂ ಉತ್ತರ ಪ್ರದೇಶ ಮೂಲದ ಇಸ್ತಿಕಾರ್ (38) ಅವರುಗಳನ್ನು ಬಂಧಿಸಲಾಗಿದೆ. ಇನ್ನು ಇವರೊಡನಿದ್ದರೆನ್ನಲಾದ ಇನ್ನೋರ್ವ ಮಹಿಳೆ ವಿನೋದ ತಲೆಮರೆಸಿಕೊಂಡಿದ್ದಾಳೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಹಿಳಾ ಪಿಂಪ್ ವಿರುದ್ಧ ಈ ಹಿಂದೆ ಸಹ ಕದ್ರಿ ಠಾಣೆಯಲ್ಲಿ ದೂರು ಆಖಲಾಗಿತ್ತು. ಕದ್ರಿ ಠಾಣೆ ಇನ್ಸ್ ಪೆಕ್ಟರ್ ಶಾಂತಾರಾಮ, ಸಬ್ ಇನ್ಸ್ ಪೆಕ್ಟರ್ ಮಾರುಪಿ ಹಾಗೂ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.