Monday, January 20, 2025
ಸುದ್ದಿ

ನಾಳೆ ಕಡಬದಲ್ಲಿ ಹುತಾತ್ಮರಾದ ಬಂಧುಗಳು ಬಲಿದಾನವನ್ನು ಸ್ಮರಿಸುವ ಸಲುವಾಗಿ ಬೃಹತ್ ರಕ್ತದಾನ ಶಿಬಿರ-ಕಹಳೆ ನ್ಯೂಸ್

ಕಡಬ: ವಿಶ್ವ ಹಿಂದೂ ಪರಿಷತ್ ಭಜರಂಗದಳ ಕಡಬ ಪ್ರಖಂಡ ಕಡಬ ತಾಲೂಕು ಇದರ ಆಶ್ರಯದಲ್ಲಿ, ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಹಾಗೂ ಸಮುದಾಯ ಆರೋಗ್ಯ ಕೇಂದ್ರ ಕಡಬ ಇದರ ಸಹಯೋಗದಲ್ಲಿ, ನಾಳೆ ಶ್ರೀ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಡೆದ ಕರಸೇವೆಯ ಸಂದರ್ಭದಲ್ಲಿ, ಹುತಾತ್ಮರಾದ ಬಂಧುಗಳು ಬಲಿದಾನವನ್ನು ಸ್ಮರಿಸುವ ಸಲುವಾಗಿ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ.

ನಾಳೆ ಬೆಳಗ್ಗೆ 10 ಗಂಟೆಗೆ ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆಯುವ, ಈ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಉಮೇಶ್ ಶೆಟ್ಟಿ ಸಾಯಿರಾಂ ವಹಿಸಿಕೊಳ್ಳಲಿದ್ದು, ಈ ವೇಳೆ ಡಾ| ರಾಮಚಂದ್ರ ಭಟ್, ಡಾ| ಶ್ರೀಮತಿ ಸುಚಿತ್ರಾ ರಾವ್, ಗೋಪಾಲಕೃಷ್ಣ ಗೌಡ ತುಂಬೆತಡ್ಕ, ಎ. ಜನಾರ್ದನ ರಾವ್, ರಾಧಾಕೃಷ್ಣ ಕೋಲ್ಪೆ ಭಾಗವಹಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಈ ಶಿಬಿರದಲ್ಲಿ ಪಾಲ್ಗೊಂಡು ಈ ಮಹತ್ಕಾರ್ಯದಲ್ಲಿ ಪಾಲುದಾರಗಬೇಕೆಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು