Recent Posts

Sunday, January 19, 2025
ಸುದ್ದಿ

ಹಲ್ಲು ವಕ್ರವಾಗಿದೆ ಎಂದು ರುಖ್ಸಾನಾ ಬೇಗಂ ತಲಾಖ್ ನೀಡಿದ ಮುಸ್ತಫಾ – ಕಹಳೆ ನ್ಯೂಸ್

ಹೈದರಾಬಾದ್, ನ 01 : ಹಲ್ಲುಗಳು ಸರಿಯಾಗಿಲ್ಲ ಎಂಬ ಕಾರಣಕ್ಕೆ ಪತ್ನಿಗೆ ವ್ಯಕ್ತಿಯೋರ್ವ ತ್ರಿವಳಿ ತಲಾಖ್ ನೀಡಿದ್ದು ಈತನ ವಿರುದ್ದ ಇದೀಗ ಹೈದರಾಬಾದ್ ಕುಶೈಗುಡಾ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

2019ರ ಜೂನ್ 27 ರಂದು ರುಖ್ಸಾನಾ ಬೇಗಂ ಮತ್ತು ಮುಸ್ತಫಾ ಇವರಿಬ್ಬರಿಗೆ ವಿವಾಹವಾಗಿದ್ದು, ಪತಿ ಮುಸ್ತಫಾ ಮತ್ತು ಅತ್ತೆ ಮಾವ ತನಗೆ ವರದಕ್ಷಿಣೆ ಕಿರುಕುಳ ನೀಡಿದ್ದಾರೆ ಎಂದು ಸಂತ್ರಸ್ತೆ ರುಖ್ಸಾನ ಆರೋಪಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕುಶೈಗುಡಾ ಠಾಣೆಯ ಇನ್ಸ್‌ಪೆಕ್ಟರ್ ಕೆ ಚಂದ್ರ ಶೇಖರ್ ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು, ಹಲ್ಲುಗಳು ವಕ್ರವಾಗಿದೆ ಎಂದು ಕಿರುಕುಳ ನೀಡಿರುವುದಲ್ಲದೆ ಹೆಚ್ಚುವರಿ ವರದಕ್ಷಿಣೆ ತರುವಂತೆ ಒತ್ತಾಯಿಸಿ ತ್ರಿವಳಿ ತಲಾಖ್ ನೀಡಿದ್ದಾರೆ ಎಂದು ಆರೋಪಿಸಿ ಸಂತ್ರಸ್ತೆ ದೂರು ನೀಡಿದ್ದಾಳೆ ಎಂದಿದ್ದಾರೆ. ಇದೀಗ ಇತನ ವಿರುದ್ದ ಭಾರತೀಯ ದಂಡ ಸಂಹಿತೆಯಡಿ ವರದಕ್ಷಿಣೆ ಕಾಯ್ದೆ ಮತ್ತು ಟ್ರಿಪಲ್ ತಲಾಖ್ ಕಾಯ್ದೆ498 ಎ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

” ನಮ್ಮ ವಿವಾಹದ ಸಂದರ್ಭದಲ್ಲಿ ಮುಸ್ತಫಾ ಮತ್ತು ಅವರ ಕುಟುಂಬವು ವರದಕ್ಷಿಣೆ ಬೇಡಿಕೆ ಇಟ್ಟಿತ್ತು. ನಮ್ಮ ಪೋಷಕರು ಪತಿ ಕುಟುಂಬದ ಬೇಡಿಕೆಗಳನ್ನು ವಿವಾಹದ ಸಂದರ್ಭದಲ್ಲೇ ಈಡೇರಿಸಿದೆ. ಆದರೆ ನಮ್ಮ ಮದುವೆಯ ನಂತರ, ನನ್ನ ಗಂಡ ಮತ್ತು ಅತ್ತೆ ಮಾವ ನನಗೆ ಕಿರುಕುಳ ನೀಡಲು ಪ್ರಾರಂಭಿಸಿದರು, ತವರು ಮನೆಯಿಂದ ಹೆಚ್ಚಿನ ಚಿನ್ನ ಮತ್ತು ಹಣವನ್ನು ತರುವಂತೆ ಕಿರುಕುಳ ನೀಡಲಾರಂಭಿಸಿದರು. ಮುಸ್ತಫಾ ಇತ್ತೀಚೆಗೆ ಕಿರುಕುಳ ನೀಡಿ ತವರು ಮನೆಯಿಂದ ಬೈಕು ಪಡೆದುಕೊಂಡಿದ್ದಾರೆ.

ಇದು ಸಾಲುವುದಿಲ್ಲ ಎಂದು ಇತ್ತಿಚೇಗೆ 15 ದಿನಗಳವರೆಗೆ ತಮ್ಮ ಮನೆಯೊಳಗೆ ಕೂಡಿಹಾಕಿ ಚಿತ್ರಹಿಂಸೆ ನೀಡಿ, ನಿನಗೆ ವಕ್ರ ಹಲ್ಲುಗಳಿದ್ದು ನನಗೆ ನೀನು ಇಷ್ಟವಿಲ್ಲ ಎಂದು ತವರು ಮನೆಗೆ ವಾಪಾಸ್ ಕಳುಹಿಸಿದ್ದಾರೆ.

ಮನೆಗೆ ಹಿಂತಿರುಗಿದ ನಾನು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಮುಸ್ತಫಾ ವಿರುದ್ದ ಪ್ರಕರಣ ದಾಖಲಿಸಿದೆ. ಆಗ ಮುಸ್ತಾಫ ಹಾಗೂ ಆತನ ಸೋದರರು ಬಂದು ರಾಜಿಪಂಚಾಯಿತಿ ಮಾಡುವುದಾಗಿ ತಿಳಿಸಿ ಮನೆಗೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದರು. ಆದರೆ, ಅಕ್ಟೋಬರ್ 1 ರಂದು ಮತ್ತೆ ಬಂದ ಮುಸ್ತಾಫ, ನನ್ನ ಹೆತ್ತವರಿಗೆ ಬಾಯಿಗೆ ಬಂದಂತೆ ಬೈಯ್ದು, ಮೂರು ಬಾರಿ ತಲಾಖ್ ಹೇಳಿ ಹೊರಟು ಹೋದ. ಕೂಡಲೆ ಮುಸ್ತಾಫನನ್ನು ಫೋನ್ ಮೂಲಕ ಸಂಪರ್ಕಿಸಿದಾಗ ಫೋನ್ ಮೂಲಕವೂ ಮೂರು ಬಾರಿ ತಲಾಖ್ ಹೇಳಿದ. ಅಕ್ಟೋಬರ್ 26 ರಂದು ಮತ್ತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ. ಪೊಲೀಸರು ಪತಿ ಹಾಗೂ ಆತನ ಕಡೆಯವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ನನಗೆ ನ್ಯಾಯ ಬೇಕು ಎಂದು ಮಹಿಳೆ ತಿಳಿಸಿದ್ದಾಳೆ.