ಪುತ್ತೂರು: ವೃತ್ತಿಯಲ್ಲಿ ನಿಷ್ಠೆ, ಪ್ರಾಮಾಣಿಕತೆಯಿಂದ ಇದ್ದರೆ ಅದು ಸಂಸ್ಥೆಗೆ ಹಾಗೂ ವೃತ್ತಿಗೆ ನೀಡುವ ಗೌರವ. ಅಂತೆಯೇ ಎಲ್ಲರಿಗೂ ಇಪ್ಪತ್ತನಾಲ್ಕು ಗಂಟೆ ಸಮಯ ದೊರೆಯುತ್ತದೆ ಆದರೆ ಅದನ್ನು ಸರಿಯಾಗಿ ಉಪಯೋಗಿಸುವವರೇ ಯಶಸ್ವಿಯಾಗುತ್ತಾರೆ.
ಅಂತಹ ನಿಷ್ಠೆ, ಪ್ರಾಮಾಣಿಕತೆಯ ವ್ಯಕ್ತಿಯನ್ನು ಸಂಸ್ಥೆ ಅಥವಾ ಸಹೋದ್ಯೋಗಿಗಳು ಎಂದಿಗೂ ನೆನಪಿನಲ್ಲಿಟ್ಟುಕೊಳ್ಳುತ್ತಾರೆ ಎಂದು ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಅಭಿಪ್ರಾಯಪಟ್ಟರು.
ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ, ಶಿಕ್ಷಕರ ಸಂಘ ಮತ್ತು ಶಿಕ್ಷಕೇತರ ಸಂಘದ ಆಶ್ರಯದಲ್ಲಿ ರಸಾಯನ ಶಾಸ್ತç ವಿಭಾಗದ ಪ್ರಯೋಗಾಲಯದ ಸಹಾಯಕ ಜಯ ಕೆ. ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಗುರುವಾರ ಮಾತನಾಡಿದರು.
ಒಬ್ಬ ವ್ಯಕ್ತಿಯನ್ನು ಅಳೆಯುವುದು ಅವರ ಮಾತಿನಿಂದ ಹಾಗೂ ಅವರ ಕೆಲಸದಿಂದ. ಇದರೊಂದಿಗೆ ಅವರ ಕೆಲಸದ ಬದ್ಧತೆಯಿಂದ ಎಲ್ಲರಿಗೂ ಮಾರ್ಗದರ್ಶಿಯಾಗುತ್ತಾರೆ. ಅಂತಹ ವ್ಯಕ್ತಿತ್ವವನ್ನು ಹೊಂದಿದವರು ಜಯ. ಇವರ ವೃತ್ತಿ ಜೀವನವನ್ನು ನೋಡಿ ಕಲಿಯುವಂತಹದ್ದು ಸಾಕಷ್ಟಿದೆ ಎಂದು ಹೇಳಿದರು.