Saturday, November 23, 2024
ಸುದ್ದಿ

ಶ್ರೀ ರಾಮ ಪ್ರೌಢಶಾಲೆಯಲ್ಲಿ ಕನ್ನಡರಾಜ್ಯೋತ್ಸವ ದಿನ ಆಚರಣೆ-ಕಹಳೆ ನ್ಯೂಸ್


ಶ್ರೀ ರಾಮ ಪ್ರೌಢಶಾಲೆಯಲ್ಲಿ ಕನ್ನಡರಾಜ್ಯೋತ್ಸವ ದಿನವನ್ನು ಆಚರಿಸಲಾಯಿತು. ಕನ್ನಡ ನಾಡು ನುಡಿ ಪರಂಪರೆಗೆ ವೈಭವ ಪೂರ್ಣ ಇತಿಹಾಸವಿದೆ.

ಕಲೆ ಸಾಹಿತ್ಯ ವಾಸ್ತುಶಿಲ್ಪದ ವೈಶಿಷ್ಟö್ಯವನ್ನು ಜಗತ್ತಿನಾದ್ಯಂತ ಪಸರಿಸಿದ ಕೀರ್ತಿ ಕನ್ನಡ ನಾಡಿನದ್ದು. ಇಂತಹ ಕನ್ನಡ ಸಂಸ್ಕೃತಿಯನ್ನು ಉಳಿಸಿ ಕಟ್ಟಿ ಬೆಳೆಸುವ ಹೊಣೆ ಕನ್ನಡಿಗರಾದ, ನಮ್ಮ ಜವಾಬ್ದಾರಿ ಎಂದು ಶಾಲಾ ವಿದ್ಯಾರ್ಥಿಯಾದ ಶಿವಾಣಿ ದೇವಾಡಿಗರವರು ಮುಖ್ಯ ಅತಿಥಿಯಾಗಿ ಕರ‍್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಕರ‍್ಯಕ್ರಮದಲ್ಲಿ ಶಾಲಾ ಸಂಸತ್ತಿನ ನಾಯಕರು ಅಥಿತಿಗಳಾಗಿ ಉಪಸ್ಥಿತರಿದು ವಿಶೇಷವಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಶಾಲಾ ನಾಯಕಿ ಸ್ವಾತಿಲಕ್ಷಿö್ಮÃ ಕರ‍್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಸಂಘ ಮತ್ತು ಹಿಂದಿ ಸಂಘದ ವತಿಯಿಂದ ಸಾಂಸ್ಕೃತಿಕ ಕರ‍್ಯಕ್ರಮ ನಡೆಯಿತು. ಶಾಲಾ ಕ್ರೀಡಾ ಮಂತ್ರಿಯಾದ ರೇಷ್ಮ, ಸಾಂಸ್ಕೃತಿಕ ಮಂತ್ರಿಯಾದ ವಾತ್ಸಲ್ಯ, ಸ್ವಚ್ಛತಾ ಮಂತ್ರಿಯಾದ ದಿವ್ಯ, ಶ್ರೀರಾಮ ವಿದ್ಯಾಕೇಂದ್ರದ ಸಹಸಂಚಾಲಕರಾದ ರಮೇಶ್ ಎನ್, ಶ್ರೀರಾಮ ಪ್ರೌಢಶಾಲಾ ಮುಖ್ಯಶಿಕ್ಷಕಿಯಾದ ವಸಂತಿಕುಮಾರಿ, ಶಿಕ್ಷಕರು ಹಾಗೂ ವಿದಾರ್ಥಿಗಳು ಉಪಸ್ಥಿತರಿದ್ದರು. ಕರ‍್ಯಕ್ರಮವನ್ನು ಚರಿಷ್ಮಾ ಸ್ವಾಗತಿಸಿ, ಸಮೀಕ್ಷಾ ಶೆಟ್ಟಿ ನಿರೂಪಿಸಿ, ಸ್ವಪ್ನ ವಂದಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು