ದೃಶ್ಯ ಮೂವೀಸ್ ಬ್ಯಾನರಿನಲ್ಲಿ ನಿರ್ಮಾಣದ ಪೆನ್ಸಿಲ್ ಬಾಕ್ಸ್ ಚಿತ್ರದ ‘ಸಂಡೆ ನಮ್ದೇ’ ಎಂಬ ವಿಡಿಯೋ ಹಾಡನ್ನು ನಿನ್ನೆ ಅದ್ದೂರಿಯಾಗಿ ಬಿಡುಗಡೆಗೊಳಿಸಲಾಯಿತು.
ಪುತ್ತೂರಿನ ಪ್ರತಿಷ್ಠಿತ ಸುದಾನ ಶಾಲೆಯ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಸುದಾನ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ಶ್ರೀ ವಿಜಯ್ ಹಾರ್ವಿನ್ ಇವರು ಬಿಡುಗಡೆಗೊಳಿಸಿ, ಚಿತ್ರ ತಂಡಕ್ಕೆ ಶುಭ ಹಾರೈಸಿದರು. ಚಿತ್ರದಲ್ಲಿ ಒಟ್ಟು ೩ ಹಾಡುಗಳಿದ್ದು, ಉಳಿದೆರಡು ಹಾಡುಗಳು ಈಗಾಗಲೇ ಬಿಡುಗಡೆಗೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.
ನವೆಂಬರ್ ೨೯ ರಂದು ಪೆನ್ಸಿಲ್ ಬಾಕ್ಸ್ ಚಿತ್ರವೂ ಕರಾವಳಿಯಾದ್ಯಂತ ತೆರೆಕಾಣಲಿದ್ದು, ಸಿನಿ ಪ್ರೇಕ್ಷರಲ್ಲಿ ಬಾರಿ ಕುತೂಹಲ ಮೂಡಿಸಿದೆ.
ನವೆಂಬರ್ ೧೪ರಂದು ಚಿತ್ರದ ಟ್ರೈಲರ್ ಬಿಡುಗಡೆಯಾಗಲಿದ್ದು, ಅಂದಿನಿAದ ಚಿತ್ರದ ಪ್ರಚಾರ ರಥ ಜಿಲ್ಲೆಯಾದ್ಯಂತ ಸಂಚರಿಸಲಿದೆ. ಸ್ಟಾರ್ ಸುವರ್ಣ ಡಾನ್ಸ್ ಡಾನ್ಸ್ ಸೀಸನ್-೨ ಹಾಗೂ ಭರ್ಜರಿ ಕಾಮಿಡಿ ರಿಯಾಲಿಟಿ ಶೋ ಮೂಲಕ ಕರ್ನಾಟಕದಲ್ಲಿ ಮನೆ ಮಾತಾದ ದೀಕ್ಷಾ ಡಿ ರೈ ಇವರು ಪ್ರಮುಖ ಪಾತ್ರ ಇವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು, ಕರಾವಳಿಯ ಧೈತ್ಯ ಪ್ರತಿಭೆಗಳಾದ ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರ್ ಹಾಗೂ ರಮೇಶ್ ರೈ ಕುಕ್ಕುವಳ್ಳಿ ಯವರು ಗಮನಾರ್ಹ ಪಾತ್ರದಲ್ಲಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.
ಇದು ಸಂಪೂರ್ಣವಾಗಿ ಸ್ಥಳೀಯ ಕಲಾವಿದರು ಹಾಗೂ ತಂತ್ರಜ್ಞರ ಒಗ್ಗೂಡುವಿಕೆಯಿಂದ ತಯಾರಾದ ಕನ್ನಡ ಚಿತ್ರವಾಗಿದ್ದು ಸೆನ್ಸಾರ್ ಮಂಡಳಿಯಿAದ ಅತ್ಯುತ್ತಮ ಚಿತ್ರವೆಂದು ಪರಿಗಣಿಸಲ್ಪಟ್ಟಿದೆ.
ಈಗಾಗಲೇ ಕನ್ನಡ ತುಳು ಸೇರಿದಂತೆ ಹಲವಾರು ಚಿತ್ರಗಳಿಗೆ ಸಂಭಾಷಣೆ, ಸಾಹಿತ್ಯ ಬರೆದು ಸಹನಿರ್ದೇಶನ ಮಾಡಿರುವ ರಜಾಕ್ ಪುತ್ತೂರು ರವರು ಪೆನ್ಸಿಲ್ ಬಾಕ್ಸ್ ಚಿತ್ರದ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಮೋಹನ್ ಪಡ್ರೆಯವರ ಕ್ಯಾಮೆರಾ ಕೈ ಚಳಕ, ಡಿಪಿನ್ ದಿವಾಕರ್ ಸಂಕಲನ ಈ ಚಿತ್ರಕ್ಕೆ ಇದೆ. ಯುವ ಸಂಗೀತ ನಿರ್ದೇಶಕ ಜಯಕಾರ್ತಿಯವರ ಸಂಗೀತ ಸಂಯೋಜನೆ ಮತ್ತು ನಿತಿನ್ ರವರ ಹಿನ್ನೆಲೆ ಸಂಗೀತ ಚಿತ್ರಕ್ಕೆ ಮತ್ತಷ್ಟು ಮೆರಗು ನೀಡುತ್ತದೆ. ಚಿತ್ರದಲ್ಲಿ ೩ ಹಾಡುಗಳಿದ್ದು ಚಿತ್ರದ ನಿರ್ದೇಶಕರೇ ಸಾಹಿತ್ಯ ಬರೆದಿದ್ದಾರೆ. ಸರಿಗಮಪ ಖ್ಯಾತಿಯ ಡಾ.ಅಭಿಷೇಕ್ ರಾವ್, ವೈಷ್ಣವಿ ಮಣಿಪಾಲ್, ಕ್ಷಿತಿ ಕೆ ರೈ ಧರ್ಮಸ್ಥಳ, ಕನ್ನಡ ಕೋಗಿಲೆ ಖ್ಯಾತಿಯ ಅಪೇಕ್ಷಾಪೈ ಮತ್ತು ಜನ್ಯ ಪ್ರಸಾದ್ ಮುಂತಾದವರು ಹಾಡಿದ್ದಾರೆ. ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ಬರುವ ಅದ್ಬುತ ನೃತ್ಯ ವೈಭವ ಚಿತ್ರದ ಹೈಲೈಟ್ ಆಗಲಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ನಟ ನಿರ್ದೇಶಕ ಸಂದೀಪ್ ಮಲಾನಿ, ನವೋದಯ ಪ್ರೌಢಶಾಲೆ ಬೆಟ್ಟಂಪಾಡಿ ಇದರ ದೈಹಿಕ ಶಿಕ್ಷಕರಾದ ಶ್ರೀ ದಯಾನಂದ ರೈ ಕೊಮ್ಮಂಡ, ಚಿತ್ರ ಹಂಚಿಕೆದಾರರಾದ ಬಾಲಕೃಷ್ಣ ಶೆಟ್ಟಿ ಕುಕ್ಕಾಡಿ ಮುಂತಾದವರು ಉಪಸ್ಥಿತರಿದ್ದರು. ಚಿತ್ರದ ಪ್ರಚಾರ ಮೇಲ್ವಿಚಾರಕರಾದ ಸಂತೋಷ್ ಕೊಲ್ಯ ರವರು ಚಿತ್ರದ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿದರು. ಇವರೊಂದಿಗೆ ಸಹನಿರ್ದೇಶಕರಾದ ಅಕ್ಷತ್ ವಿಟ್ಲ ರವರು ಸಹಕರಿಸಿದರು.
ಲಿಟ್ಲ್ ಫ್ಲವರ್ ಶಾಲೆ ಪುತ್ತೂರು ಇದರ ಶಿಕ್ಷಕರಾದ ಬಾಲಕೃಷ್ಣ ಶೆಟ್ಟಿ ಪೊರ್ದಳ್ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಈ ಸಂದರ್ಭದಲ್ಲಿ ಚಿತ್ರತಂಡದ ಎಲ್ಲ ಸದಸ್ಯರು ಭಾಗವಹಿಸಿದ್ದರು.
ಪೆನ್ಸಿಲ್ ಬಾಕ್ಸ್ ಚಿತ್ರತಂಡದಿAದ ವಿಶೇಷ ವಿದ್ಯಾರ್ಥಿವೇತನ
ವಿದ್ಯಾರ್ಥಿಗಳಿಗೆ ಕೊಟ್ಟಿರುವ ಕೂಪನ್‌ನನ್ನು ಸರಿಯಾಗಿ ಭರ್ತಿಮಾಡಿ, ಚಿತ್ರ ವೀಕ್ಷಿಸಿದ ನಂತರ ಟಿಕೆಟ್‌ನೊಂದಿಗೆ ಲಗತ್ತಿಸಿ ಚಿತ್ರಮಂದಿರದಲ್ಲಿರುವ ಬಾಕ್ಸ್ನಲ್ಲಿ ಹಾಕತಕ್ಕದು. ಲಕ್ಕಿ ಕೂಪನ್ ಮೂಲಕ ಆಯ್ಕೆಗೊಂಡ ಅದೃಷ್ಟವಂತ ೫೦ ಮಂದಿ ವಿದ್ಯಾರ್ಥಿಗಳಿಗೆ ತಲಾ ರೂಪಾಯಿ ೧೦೦೦/- ದಂತೆ ನೀಡಲಾಗುವುದು.