Wednesday, January 22, 2025
ಸುದ್ದಿ

ಬ್ರೇಕಿಂಗ್ : ೧೧.೮೮ ಕೋಟಿ ಸಾಲ ಪಡೆದು ವಂಚನೆ ಪ್ರಕರಣ : ಮಾಜಿ ಸಚಿವ ‘ಬಾಬುರಾವ್ ಚಿಂಚನಸೂರ್’ಗೆ ಸಂಕಷ್ಟ-ಕಹಳೆ ನ್ಯೂಸ್

ಬೆಂಗಳೂರು : ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಅವರು ಸಾಲಪಡೆದು ವಂಚನೆ ಮಾಡಿದ್ದರಿಂದ ನೊಂದು ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಚಂದ್ರಲೇಔಟ್ ನಲ್ಲಿ ನಡೆದಿದೆ. ಈಗಾಗಿ ಪ್ರಕರಣದಲ್ಲಿ ಇದೀಗ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಚಂದ್ರಲೇಔಟ್ ನಲ್ಲಿನ ಅಂಜನಾ ಎಂಬುವರಿಂದ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ೧೧.೮೮ ಕೋಟಿ ಹಣವನ್ನು ಸಾಲ ಪಡೆದಿದ್ದರು. ಆದ್ರೇ ಸಾಲ ಪಡೆ ನಂತ್ರ ಹಿಂದಿರುಗಿಸಿದ ಕಾರಣ, ಹಣವನ್ನು ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಅವರಿಂದ ಕೊಡಿಸುವಂತೆ ಅಂಜನಾ ಅವರು ಕೋರ್ಟ್ ಮೆಟ್ಟಿಲೇರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂಬಂಧ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿಯೇ ವಿವಿಧ ಕಡೆಯಿಂದ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಗೆ ೧೧.೮೮ ಕೋಟಿ ಹಣ ಸಾಲವಾಗಿ ಕೊಡಿಸಿದ್ದರೂ, ಮರಳಿ ಕೊಡದೇ ವಂಚಿಸಿದ್ದರಿಂದ ಅಂಜನಾ ಸಾಲ ಪಡೆದಿದ್ದ ಬೇರೆಯವರು ಅಂಜನಾ ಅವರನ್ನು ಪೀಡಿಸಲು ಆರಂಭಿಸಿದ್ದರು. ಹೀಗಾಗಿ ಮನನೊಂದು ಅಂಜನಾ ವಿ ಶಾಂತವೀರ ಎಂಬ ಮಹಿಳೆ ಇಂದು ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆಗೂ ಮುನ್ನಾ ತನ್ನ ಮಗನಿಗೆ ಕರೆಮಾಡಿದ್ದ ಅಂಜನಾ, ನೀನೆ ಬಂದು ನನ್ನ ದೇಹಕ್ಕೆ ಬೆಂಕಿ ಇಡುವಂತೆ ಕೂಡ ತಿಳಿಸಿದ್ದರು ಎಂಬುದಾಗಿ ತಿಳಿದು ಬಂದಿದೆ. ಈ ಸಂಬಂಧ ಚಂದ್ರಾಲೇಔಟ್ ನ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೀಗಾಗಿ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಗೆ ಇದೀಗ ಸಂಕಷ್ಟ ಎದುರಾಗಿದೆ