Tuesday, January 21, 2025
ರಾಜಕೀಯ

ಶ್ರೀನಗರದ ಲಾಲ್ ಚೌಕ್ ಬಳಿ ಉಗ್ರರ ಗ್ರೆನೇಡ್ ದಾಳಿಗೆ ಓರ್ವ ಸಾವು, 13 ಮಂದಿಗೆ ಗಾಯ – ಕಹಳೆ ನ್ಯೂಸ್

ಶ್ರೀನಗರ: ಕಾಶ್ಮೀರ ಕಣಿವೆಯ ಶ್ರೀನಗರದ ಲಾಲ್ ಚೌಕ್ ಬಳಿ ಇರುವ ಜನನಿಬಿಡ ಅಮೀರಾ ಕದಲ್ ಮೇಲೆ ಸೋಮವಾರ ಉಗ್ರರು ಗ್ರೆನೇಡ್ ಎಸೆದಿದ್ದರಿಂದ ಓರ್ವ ನಾಗರಿಕ ಸಾವನ್ನಪ್ಪಿದ್ದು ಹದಿಮೂರು ಮಂದಿ ಗಾಯಗೊಂಡಿದ್ದಾರೆ

ಉತ್ತರ ಕಾಶ್ಮೀರದ ಸೊಪೋರ್ ನಲ್ಲಿ ಕಳೆದ ವಾರ ಇದೇ ಬಗೆಯ ದಾಳಿಯಾಗಿ ಹದಿನೈದು ಮಂದಿ ಗಾಯಗೊಂಡಿದ್ದ ನಂತರ ಮತ್ತೆ ಉಗ್ರರ ದಾಳಿ ನಡೆದಿದೆ.ಈ ಬಾರಿ ಉಗ್ರರು ಜನನಿಬಿಡ ಮಾರುಕಟ್ಟೆ ಪ್ರದೇಶದಲ್ಲೇ ದಾಳಿ ನಡೆಸಿರುವುದು ಹೆಚ್ಚಿನ ಸಾವು ನೋವಿಗೆ ಕಾರಣವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ಆಗಸ್ಟ್ ಐದರಂದು ರ್ಟಿಕಲ್ 370 ಅನ್ನು ರದ್ದುಪಡಿಸಿದ ನಂತರ ಸುಮಾರು ಮೂರು ಬಳಿಕ ಸಾರ್ವಜನಿಕ ಜನಜೀವನವು ಸಾಮಾನ್ಯ ಸ್ಥಿತಿಗೆ ಬರಲು ಪ್ರಾರಂಭವಾಗಿದೆ. ಆದರೆ ಇದೀಗ ಮತ್ತೆ ಪಾಕ್ ಉಗ್ರರು ತಮ್ಮ ಉಪಟಳ ಮುಂದುವರಿಸಿರುವುದು ಹೆಚ್ಚಿನ ಆತಂಕಕ್ಕೆ ಕಾರಣವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

“ಗಾಯಾಳುಗಳು ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರೇ ಆಗಿದ್ದು ಅವರನ್ನು  ಚಿಕಿತ್ಸೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸಧ್ಯ ಈ ಸುತ್ತಮುತ್ತಲ ಪ್ರದೇಶದಲ್ಲಿ ಉಗ್ರರಿಗಾಗಿ ಶೋಧ ಖಾರ್ಯಾಚರಣೆ ನಡೆಯುತ್ತಿದೆ” ಪೋಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಶ್ರೀನಗರ ನಗರದ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ಮಾರುಕಟ್ಟೆಗಳು ತೆರೆದಿದ್ದಾಗ ಹಾಗೂ ವಾಹನ, ಜನ ಸಂಚಾರ ಸಹಜ ಸ್ಥಿತಿಯಲ್ಲಿದ್ದಾಗಲೇ ಈ ದಾಳಿ ನಡೆದಿದೆ.ಸುಮಾರು ಮೂರು ತಿಂಗಳ ನಂತರ ಸಿವಿಲ್ ಲೈನ್ಸ್ ಮತ್ತು ಶ್ರೀನಗರಹೊರವಲಯದಲ್ಲಿ ಸಾರ್ವಜನಿಕ ಸಾರಿಗೆ ಸಂಚಾರ ಸಹ ಪ್ರಾರಂಬವಾಗಿದೆ.