ಬೆಂಗಳೂರು: ನವೆಂಬರ್ 4: ಪದವಿಪೂರ್ವ ಶಿಕ್ಷಣ ಇಲಾಖೆಯು 2019-20ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಿದೆ. 2020ರ ಮಾರ್ಚ್ ತಿಂಗಳಿನಿಂದ ಪರೀಕ್ಷೆಗಳು ಆರಂಭವಾಗಲಿವೆ. ಪ್ರತಿ ಬಾರಿಗಿಂತ ಪ್ರಸಕ್ತ ವರ್ಷ ತುಸು ಮೊದಲೇ ವೇಳಾಪಟ್ಟಿ ಪ್ರಕಟಿಸಲಾಗಿದೆ.
ಪರೀಕ್ಷೆಯ ವೇಳಾಪಟ್ಟಿ ಹೀಗಿದೆ:
* ಮಾರ್ಚ್ 4: ಇತಿಹಾಸ, ಭೌತಶಾಸ್ತ್ರ, ಮೂಲ ಗಣಿತ
* ಮಾರ್ಚ್ 5: ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೇಬಿಕ್, ಫ್ರೆಂಚ್
* ಮಾರ್ಚ್ 6: ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ
* ಮಾರ್ಚ್ 7: ಬಿಸಿನೆಸ್ ಸ್ಟಡೀಸ್, ಸಮಾಜಶಾಸ್ತ್ರ, ರಸಾಯನ ಶಾಸ್ತ್ರ
* ಮಾರ್ಚ್ 9: ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೊಮೊಬೈಲ್, ಆರೋಗ್ಯ, ಸೌಂದರ್ಯ ಮತ್ತು ಕ್ಷೇಮ
* ಮಾರ್ಚ್ 10: ಉರ್ದು
* ಮಾರ್ಚ್ 11: ಕನ್ನಡ ಐಚ್ಛಿಕ, ಅಕೌಂಟೆನ್ಸಿ, ಗಣಿತ
* ಮಾರ್ಚ್ 12: ಭೂಗೋಳ ಶಾಸ್ತ್ರ
* ಮಾರ್ಚ್ 13: ಶಿಕ್ಷಣ
* ಮಾರ್ಚ್ 14: ಮನೋವಿಜ್ಞಾನ, ಕಂಪ್ಯೂಟರ್ ವಿಜ್ಞಾನ, ಎಲೆಕ್ಟ್ರಾನಿಕ್ಸ್
* ಮಾರ್ಚ್ 16: ತರ್ಕಶಾಸ್ತ್ರ, ಭೂವಿಜ್ಞಾನ, ಗೃಹ ವಿಜ್ಞಾನ
* ಮಾರ್ಚ್ 17: ಅರ್ಥಶಾಸ್ತ್ರ, ಜೀವಶಾಸ್ತ್ರ
* ಮಾರ್ಚ್ 18: ಹಿಂದಿ
* ಮಾರ್ಚ್ 19: ಕನ್ನಡ
* ಮಾರ್ಚ್ 20: ಸಂಸ್ಕೃತ
* ಮಾರ್ಚ್ 21: ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
* ಮಾರ್ಚ್ 23: ಇಂಗ್ಲಿಷ್