Recent Posts

Sunday, January 19, 2025
ಸುದ್ದಿ

ಚಿಕ್ಕಮಗಳೂರು ಶಾಸಕ ಸಿ ಟಿ ರವಿಗೆ ‘ Y ‘ಕೆಟಗರಿಯ ಪೊಲೀಸ್ ಭದ್ರತೆ – ಕಹಳೆ ನ್ಯೂಸ್

 

ಚಿಕ್ಕಮಗಳೂರು : ಶಾಸಕ ಸಿ ಟಿ ರವಿಗೆ ಜೀವ ಬೆದರಿಕೆ ಒಡ್ಡಿರುವ ಪತ್ರವೊಂದು ಬಸವನಹಳ್ಳಿಯಲ್ಲಿರುವ ಶಾಸಕರ ಕಚೇರಿಗೆ ಮಂಗಳವಾರ ತಲುಪಿದೆ. ಬೆಳಗ್ಗೆ ಪತ್ರ ಸಿಕ್ಕ ತಕ್ಷಣ ಎಚ್ಚೆತ್ತುಕೊಂಡ ಶಾಸಕರ ಆಪ್ತ ಸಿಬ್ಬಂದಿಗಳು ವಿಷಯನ್ನು ರವಿ ಗಮನಕ್ಕೆ ತಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹಿನ್ನಲೆಯಲ್ಲಿ ಶಾಸಕರು ಬೆದರಿಕೆ ಪತ್ರ ಕುರಿತಂತೆ ಪೊಲೀಸರಿಗೆ ದೂರು ಸಲ್ಲಿಸಿದರು. ದೂರು ಸ್ವೀಕರಿಸಿರುವ ಪೊಲೀಸರು ಬೆದರಿಕೆ ಪತ್ರದ ಜಾಡು ಹಿಡಿಯಲು ಪ್ರತ್ಯೇಕ ತಂಡವೊಂದನ್ನು ರಚಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜೊತೆಗೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸರ್ಕಾರದಿಂದ ಈಗಾಗಲೇ ನೀಡಲಾಗಿರುವ Y ಸೆಕ್ಯೂರಿಟಿ ಭದ್ರತೆಯೊಂದಿಗೆ ಇನ್ನಷ್ಟು ಭದ್ರತೆ ಒದಗಿಸಲು ನಿರ್ದೇಶನ ನೀಡಿದ್ದಾರೆ.

ವರದಿ : ಕಹಳೆ ನ್ಯೂಸ್

Leave a Response