ಭಾರತ ಸರಕಾರದ ರಾಷ್ಟ್ರೀಯ ಕಾನೂನು ಪ್ರಾಧಿಕಾರದಿಂದ ನೀಡಲ್ಪಡುವ ಗೌರವಕ್ಕೆ ಸಮಾಜ ಸೇವಕ ವಿಶು ಶೆಟ್ಟಿ ಆಯ್ಕೆ – ಕಹಳೆ ನ್ಯೂಸ್
ಉಡುಪಿ: ರಾಷ್ಟ್ರೀಯ ಕಾನೂನು ಪ್ರಾಧಿಕಾರ ಭಾರತ ಸರಕಾರ-ನವದೆಹಲಿ ಇವರಿಂದ ನೀಡಲ್ಪಡುವ, “ರಾಷ್ಟ್ರಮಟ್ಟದ ಉತ್ತಮ ಕಾನೂನು ಪ್ರಾಧಿಕಾರದ ಸ್ವಯಂಸೇವಕ” ವಿಶೇಷ ಗೌರವಕ್ಕೆ ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರನ್ನು ಆಯ್ಕೆಗೊಳಿಸಿದ್ದಾರೆ.
ಕರ್ನಾಟಕ ರಾಜ್ಯದಿಂದ ಆಯ್ಕೆಯಾಗಿರುವ ಈ ಸಾಲಿನ ಏಕೈಕ ವ್ಯಕ್ತಿ ಮತ್ತು ಉಡುಪಿ ಜಿಲ್ಲೆಯ ಸಾಧಕರಿಗೆ ರಾಷ್ಟ್ರೀಯ ಕಾನೂನು ಪ್ರಾಧಿಕಾರ ದಿಂದ ಸಲ್ಲಿಕೆಯಾಗುವ ಗೌರವಕ್ಕೆ ಪಾತ್ರವಾಗುವ ಪ್ರಥಮ ಸಾಧಕ ವ್ಯಕ್ತಿ ಇವರೆಂದು ತಿಳಿದು ಬಂದಿದೆ.
ವಿಶು ಶೆಟ್ಟಿ ಅವರು ಯಾವುದೇ ಫಲಾಪೇಕ್ಷೆ ಬಯಸದೆ ಮಾಡಿರುವ ಅಪ್ರತಿಮ ಸಮಾಜಸೇವೆ, ಕಾನೂನಿನ ಪರಿಪಾಲನೆ, ಅಸಹಾಯಕ ಸ್ಥಿತಿಯಲ್ಲಿರುವ ಮಹಿಳೆಯರ ರಕ್ಷಣೆ, ಮಕ್ಕಳ ರಕ್ಷಣೆ, ಹಿರಿಯ ನಾಗರಿಕರ ರಕ್ಷಣೆ, ಮಾನಸಿಕ ಅಸ್ವಸ್ಥರ ರಕ್ಷಣೆ, ನಿರ್ಗತಿಕರಿಗೆ ಪುರ್ನವಸತಿ, ಶಿಕ್ಷಣಕ್ಕೆ ನೆರವು ಮೊದಲಾದ ಮಾದರಿಯ ಸಮಾಜಮುಖಿ ಕೆಲಸ ಕಾರ್ಯಗಳ ಗುರುತಿಸಿ ಇವರನ್ನು ಗೌರವಕ್ಕೆ ಆಯ್ಕೆಗೊಳಿಸಲಾಗಿದೆ.
ನವೆಂಬರ್ ೯ ರಂದು ನವದೆಹಲಿಯ ಸುಪ್ರಿಂಕೊರ್ಟ್ನಲ್ಲಿ ನಡೆಯುವ ಸಮಾರಂಭದಲ್ಲಿ ಕೇಂದ್ರ ಕಾನೂನು ಸಚಿವ ರವಿ ಶಂಕರ್ ಪ್ರಸಾದ್ ಹಾಗೂ ಸುಪ್ರಿಂಕೊರ್ಟಿನ ಮುಖ್ಯ ನ್ಯಾಯಧೀಶರುಗಳಿಂದ ವಿಶು ಶೆಟ್ಟಿ ಅವರು ಗೌರವ ಸ್ವೀಕರಿಸಲಿದ್ದಾರೆ