Recent Posts

Monday, January 20, 2025
ಸುದ್ದಿ

ಪುತ್ತೂರು: ಶ್ರೀ ರಾಮ್ ಪ್ರೆಂಡ್ಸ್(ರಿ) ಪಡ್ನೂರು ಇದರ ಆಶ್ರಯದಲ್ಲಿ ಪುರುಷರ ವಿಭಾಗದ ಪ್ರೋ ಮಾದರಿಯ ಮುಕ್ತ ಕಬ್ಬಡ್ಡಿ ಪಂದ್ಯಾಟ-ಕಹಳೆ ನ್ಯೂಸ್

ಶ್ರೀ ರಾಮ್ ಪ್ರೆಂಡ್ಸ್(ರಿ) ಪಡ್ನೂರು, ಪುತ್ತೂರು ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಹಿಂದೂ ಭಾಂಧವರಿಗಾಗಿ ಪುರುಷರ ವಿಭಾಗದ ಪ್ರೋ ಮಾದರಿಯ ಮುಕ್ತ ಕಬ್ಬಡ್ಡಿ ಪಂದ್ಯಾಟವು ನವೆಂಬರ್ ೧೭ರಂದು ಪಡ್ನೂರು ಶಾಲಾ ವಠಾರದ ಕರುಣೋದಯ ಮ್ಯಾಟ್ ಅಂಕಣದಲ್ಲಿ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

೭೫೦ರೂ ಪ್ರವೇಶ ಶುಲ್ಕದ ಈ ಪಂದ್ಯದ ಪ್ರಥಮ ಬಹುಮಾನವಾಗಿ ರೂ.೧೦,೦೧೯ಹಾಗು ಅಟಲ್ ಬಿಹಾರಿ ವಾಜಪೇಯಿ ಟ್ರೋಫಿ, ದ್ವಿತೀಯ ಬಹುಮಾನವಾಗಿ ರೂ.೭,೦೧೯ಹಾಗು ಅಟಲ್ ಬಿಹಾರಿ ವಾಜಪೇಯಿ ಟ್ರೋಫಿ, ತೃತೀಯ ಬಹುಮಾನವಾಗಿ ರೂ.೩,೦೧೯ಹಾಗು ಅಟಲ್ ಬಿಹಾರಿ ವಾಜಪೇಯಿ ಟ್ರೋಫಿ, ಚತುರ್ಥ ಬಹುಮಾನವಾಗಿ ರೂ.೩,೦೧೯ಹಾಗು ಅಟಲ್ ಬಿಹಾರಿ ವಾಜಪೇಯಿ ಟ್ರೋಫಿ ನೀಡಲಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಳಗ್ಗೆ ಗಂಟೆ ೧೦ಕ್ಕೆ ಉದ್ಘಾಟನಾ ಸಮಾರಂಭ, ರಾತ್ರಿ ಗಂಟೆ ೭ಕ್ಕೆ ಸಭಾ ಕಾರ್ಯಕ್ರಮ , ರಾತ್ರಿ ಗಂಟೆ ೮ಕ್ಕೆ ಅನ್ನ ಸಂತರ್ಪಣೆ, ೮.೩೦ಕ್ಕೆ ವಿಶೇಷ ಸುಡುಮದ್ದು ಪ್ರದರ್ಶನ ನಂತರ ಲ.ಕಿಶೋರ್ ಡಿ ಶೆಟ್ಟಿ ಮಂಗಳೂರು ಇವರ ಲಲಿತೆ ಕಲಾವಿದರು ಇವರಿಂದ ಪುತ್ತೂರು ತಾಲೂಕಿನಲ್ಲಿ ಪ್ರಥಮ ಬಾರಿಗೆ “ಕಟೀಲ್ದಪ್ಪೆ ಉಳ್ಳಾಲ್ತಿ” ಪೌರಾಣಿಕ ತುಳು ನಾಟಕ ಜರುಗಲಿದೆ.