Saturday, November 23, 2024
ಕ್ರೀಡೆ

‘ಐಪಿಎಲ್’ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದೆ ಬಿಸಿಸಿಐ-ಕಹಳೆ ನ್ಯೂಸ್

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2020) ನ 13 ನೇ ಆವೃತ್ತಿಗೂ ಮುನ್ನವೇ ಬಿಸಿಸಿಐ ಅನೇಕ ಕ್ರಾಂತಿಕಾರಿ ಬದಲಾವಣೆಗಳನ್ನು ಮಾಡುವ ಆಲೋಚನೆಯಲ್ಲಿದೆ. ಮುಂದಿನ ಋತುವಿನಲ್ಲಿ ಪವರ್ ಪ್ಲೇಯರ್ ಅನ್ನು ಬಳಸಬಹುದೆಂದು ಮಂಗಳವಾರ ವರದಿಗಳು ಬಂದಿದ್ದವು. ಈಗ ಐಪಿಎಲ್ ಮೊದಲು ತಂಡಗಳು ವಿದೇಶದಲ್ಲಿ ಸ್ನೇಹಪರ ಪಂದ್ಯಗಳನ್ನು ಆಡಬಹುದು ಎನ್ನಲಾಗ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಾಧ್ಯಮಗಳ ವರದಿ ಪ್ರಕಾರ, ಮುಂಬೈ ಇಂಡಿಯನ್ಸ್, ಕೋಲ್ಕತಾ ನೈಟ್ ರೈಡರ್ಸ್ ಮತ್ತು ಸನ್‌ ರೈಸರ್ಸ್ ಹೈದರಾಬಾದ್ ತಂಡಗಳು ಟೂರ್ನಮೆಂಟ್ ಪ್ರಾರಂಭವಾಗುವ ಮೊದಲು ವಿದೇಶದಲ್ಲಿ ಸ್ನೇಹಪರ ಪಂದ್ಯಗಳನ್ನು ಆಡಲು ಬಯಸುತ್ತೇವೆ ಎಂದು ಬಿಸಿಸಿಐಗೆ ಹೇಳಿದೆ. ದೆಹಲಿ ತಂಡ ಕೂಡ ಇದಕ್ಕೆ ಒಪ್ಪಿಗೆ ನೀಡಿದೆ ಎನ್ನಲಾಗ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಐಪಿಎಲ್ ಅಭಿಮಾನಿಗಳು ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದಾದ್ಯಂತ ಇದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ತಂಡಗಳು ವಿದೇಶದಲ್ಲಿಯೂ ಅಭ್ಯಾಸ ಪಂದ್ಯಗಳನ್ನು ಆಡಿದರೆ ಲೀಗ್‌ ಗೆ ಲಾಭವಾಗಲಿದೆ. ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಲಾಗುವುದು ಎಂದು ಮೂಲಗಳು ಹೇಳಿವೆ.