Monday, January 20, 2025
ಸುದ್ದಿ

ಗಂಧದ ಮರ ಸಾಗಿಸುತ್ತಿದ್ದ ಕಳ್ಳರು ಸುಳ್ಯದಲ್ಲಿ ಪತ್ತೆ- ಕಹಳೆ ನ್ಯೂಸ್

ನಿನ್ನೆ ಸಮಯ ಸುಮಾರು ೧೫:೦೦ ಗಂಟೆಗೆ ಸುಳ್ಯ ತಾಲೂಕು ಜಾಲ್ಸೂರು ಗ್ರಾಮದ ಜಾಲ್ಸೂರು ಎಂಬಲ್ಲಿ ಸುಳ್ಯ ಪೊಲೀಸ್ ಠಾಣಾ ಪೊಲೀಸರು ಮಡಿಕೇರಿ ಕಡೆಯಿಂದ ಪುತ್ತೂರು ಕಡೆಗೆ ಬರುತ್ತಿದ್ದ ಕೆಎ-೫೫-ಎಂ-೦೩೧೪ ಮಾರುತಿ ಆಲ್ಟೋ ಕಾರಿನಲ್ಲಿ ಆರೋಪಿಗಳಾದ ಕೊಡಗು ಜಿಲ್ಲೆಯ ಸೋಮವಾರಪೇಟೆಯ ನಿವಾಸಿಗಳಾದ ಅಶ್ರಫ್ ಮತ್ತು ಉನೈಸ್‌ರವರು ಯಾವುದೇ ಪರವಾನಿಗೆ ಇಲ್ಲದೆ ಶುಂಠಿಕೊಪ್ಪದ ಕೃಷ್ಣ ಕುಟ್ಟಿ ಎಂಬವರೊ0ದಿಗೆ ಸೇರಿದ ಎರಡು ಗೋಣಿ ಚೀಲಗಳಲ್ಲಿ ಸುಮಾರು ೩೧.೪೨೪ ಕೆಜಿಗಳಷ್ಟು ತೂಕದ ೪೦ ಗಂಧದ ಹಸಿ ಕೊರಡುಗಳನ್ನು ಮತ್ತು ೩ ಚಕ್ಕೆಗಳನ್ನು ತುಂಬಿಸಿ ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಲಾಗಿದೆ.

ವಶಕ್ಕೆ ಪಡೆದುಕೊಂಡಿರುವ ಸ್ವತ್ತುಗಳ ಅಂದಾಜು ಮೌಲ್ಯ ೬೫,೦೦೦/- ಮತ್ತು ಕಾರಿನ ಅಂದಾಜು ಮೌಲ್ಯ ರೂ ೭೫,೦೦೦/- ಆಗಬಹುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆ ಕಲಂ : ೩೭೯ ಐಪಿಸಿ, ೭೧(ಎ), ೮೬,೮೭ ಕರ್ನಾಟಕ ಅರಣ್ಯ ಕಾಯ್ದೆ-೧೯೬೩ಯಂತೆ ಪ್ರಕರಣ ದಾಖಲಾಗಿದೆ

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು