Sunday, November 17, 2024
ಸುದ್ದಿ

ಇಂದು ಕಲ್ಲೇಗ ನೇಮೋತ್ಸವ | ಕಲ್ಕುಡ ಕಲ್ಲುರ್ಟಿಗೆ ನರ್ತನ ಸೇವೆ – ಕಹಳೆ ನ್ಯೂಸ್

ಪುತ್ತೂರು :ಜ 30: ಇತಿಹಾಸ ಪ್ರಸಿದ್ದ ಕಾರಣಿಕದ ದೈವಗಳಾದ ಪುತ್ತೂರು ತಾಲೂಕು ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವಸ್ಥಾನದಲ್ಲಿ ವರ್ಷಾವದಿ ನೇಮೋತ್ಸವ ಜ.30 ಇಂದು ಜರಗುತ್ತಿದೆ.
ಬೆಳಿಗ್ಗೆ ದೈವದ ಭಂಡಾರದ ಕಾರ್ಜಾಲು ಗುತ್ತಿನಲ್ಲಿ ಸ್ಥಳಶುದ್ದಿ ಹೋಮ ಮತ್ತು ಕಲಶ ಪ್ರತಿಷ್ಠೆ ಜರಗಿ ದೈವಸ್ಥಾನದಲ್ಲಿ ಗಣಹೋಮ ಮತ್ತು ಶ್ರೀ ದೈವಗಳ ತಂಬಿಲ ಮತ್ತು ನಾಗತಂಬಿಲ ನಡೆಯಿತು.
ಮಧ್ಯಾಹ್ನ ಹತ್ತು ಸಾವಿರದಷ್ಟು ಭಕ್ತಾಧಿಗಳು ದೈವಗಳ ಭಂಡಾರದ ವತಿಯಿಂದ ಜರಗಿದ ಮಹಾ ಅನ್ನ ಪ್ರಸಾದ ಸ್ವೀಕರಿಸಿದರು.

ರಾಹುಗ್ರಸ್ಥ ಚಂದ್ರ ಗ್ರಹಣದ ಕಾರಣ ಸಮಯದಲ್ಲಿ ಬದಲಾವಣೆ

ಜಾಹೀರಾತು
ಜಾಹೀರಾತು
ಜಾಹೀರಾತು

ನಾಳೆ (ಜ 31ರಂದು ) ರಾಹುಗ್ರಸ್ಥ ಚಂದ್ರ ಗ್ರಹಣ ಇರುವುದರಿಂದ ನೇಮದ ಧಾರ್ಮಿಕ ವಿಧಿ ವಿಧಾನಗಳು ಕಳೆದ ಬಾರಿಗಿಂತ ಬೇಗ ಜರುಗಲಿದೆ. ರಾತ್ರಿ 8 ಗಂಟೆಗೆ ದೈವಗಳ ಮೂಲನೆಲೆಯಾದ ಕಾರ್ಜಾಲು ಗುತ್ತಿನಿಂದ ಭಂಡಾರ ಹೊರಡುತ್ತದೆ. ರಾತ್ರಿ 9.30ಕ್ಕೆ ಗೋಂದಲು ಪೂಜೆ ರಾತ್ರಿ 12 ಗಂಟೆಗೆ ಶ್ರೀ ಕಲ್ಕುಡ ಕಲ್ಲುರ್ಟಿ ದೈವಗಳ ನೇಮೋತ್ಸವ ಜರಗಲಿದೆ.ನಾಳೆ ಬೆಳಿಗ್ಗೆ 5.30  ಬೂಲ್ಯ(ದೈವ್ಯಗಳು ನೀಡುವ ಪ್ರಸಾದ ) ನೀಡಲಾಗುವುದು.

ಜಾಹೀರಾತು
ಜಾಹೀರಾತು
ಜಾಹೀರಾತು


ಜ.31ರಂದು ಗ್ರಹಣವಿರುವುದರಿಂಕ್ಕೆ ದೈವಗಳ ದ ದೈವಗಳಿಗೆ ಹರಕೆ ತೀರಿಸುವ ಭಕ್ತಾಧಿಗಳು ಇಂದು ಸಂಜೆ 5 ಗಂಟೆಗೆ ದೈವಸ್ಥಾನದಲ್ಲಿ ಹಾಜರಿರಬೇಕಾಗಿ ದೈವಸ್ಥಾನದ ಪ್ರಕಟನೆ ತಿಳಿಸಿದೆ.

ವರದಿ ಸಂಗ್ರಹ : ಕಹಳೆ ನ್ಯೂಸ್

Leave a Response