Sunday, January 19, 2025
ಸಿನಿಮಾ

ಸುಚಿ ಲೀಕ್ಸ್‌ನಲ್ಲಿ ಸ್ಯಾಂಡಲ್‌ವುಡ್ ನಟಿಯರ ಅಶ್ಲೀಲ ವೀಡಿಯೋ! – ಕಹಳೆ ನ್ಯೂಸ್‍

ಚೆನ್ನೈ: ಖ್ಯಾತ ಗಾಯಕಿ ಸುಚಿತ್ರಾ ಕಾರ್ತಿಕ್ ಅವರು ಪ್ರಸಿದ್ಧ ನಟ, ನಟಿಯರ ಅಶ್ಲೀಲ ಚಿತ್ರಗಳ ಟ್ವೀಟ್ ಕಾಲಿವುಡ್‌ನಲ್ಲಿಯೇ ಸಂಚಲನ ಮೂಡಿಸಿತ್ತು. ಇದೀಗ ಅದರ ಮುಂದವರಿದ ಭಾಗವಾದ ‘ಸುಚಿ ಲೀಕ್ಸ್’ ಎಲ್ಲ ದಕ್ಷಿಣ ಭಾರತ ಚಿತ್ರರಂಗದ ನಟ, ನಟಿಯರ ಹೊಟ್ಟೇಲೂ ಅವಲಕ್ಕಿ ಕುಟ್ಟಿದಂತೆ ಮಾಡುತ್ತಿದೆ!

ಈಗಾಗಲೇ ಸಂಚಿತಾ ಶೆಟ್ಟಿ, ಅಮಲಾ ಪೌಲ್ ಹಾಗೂ ನಟ ಧನುಶ್ ಅವರ ಅಶ್ಲೀಲ ಚಿತ್ರಗಳು ಮಾತ್ರ ಲೀಕ್ ಆಗಿವೆ. ಕನ್ನಡದ ನಟಿ ಮಣಿಯರು ಸೇರಿ, ದಕ್ಷಿಣ ಭಾರತದ ಇತರೆ ತಾರೆಗಳ ಹಿಸಿಬಿಸಿ ದೃಶ್ಯಗಳ ವೀಡಿಯೋ ಲೀಕ್ ಆಗಲಿವೆ ಎಂಬ ಸುದ್ದಿ ಹರಿದಾಡುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಅದರಲ್ಲಿಯೂ ಕನ್ನಡ ಸೇರಿ ದಕ್ಷಿಣ ಭಾರತೀಯ ಚಿತ್ರಗಳಲ್ಲಿ ನಟಿಸಿರುವ ನಟಿಯೊಬ್ಬಳು ಪ್ರಮುಖ ನಟನೊಂದಿಗೆ ನಡೆಸಿದ ರಾಸಲೇಲೆ ದೃಶ್ಯಗಳು ಈ ಸುಚಿ ಲೀಕ್ಸ್‌ನ ಮುಂದಿನ ಸರದಿಯಂತೆ! ಇಂಥದ್ದೊಂದು ಸುದ್ದಿಯಿಂದ ಕೇವಲ ಆ ನಟಿ ಮಾತ್ರವಲ್ಲ, ಈಗಾಗಲೇ ಅವಕಾಶಕ್ಕಾಗಿ ಮತ್ತೊಬ್ಬರೊಂದಿಗೆ ಹಾಸಿಗೆ ಹಂಚಿಕೊಂಡಿದ್ದಾರೆನ್ನಲಾದ ನಟಿಯರಲ್ಲಿಯೂ ತಳಮಳ ಸೃಷ್ಟಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

‘ನನ್ನ ಅಕೌಂಟ್ ಹ್ಯಾಕ್ ಆಗಿದ್ದು, ಅದನ್ನು ಡಿಲೀಟ್ ಮಾಡಿದರೂ ಇನ್ಯಾರೋ ಈ ಅಕೌಂಟ್‌ ಅನ್ನು ಬಳಸಿಕೊಳ್ಳುತ್ತಿದ್ದಾರೆ,’ ಎಂದು ಗಾಯಕಿ ಈಗಾಗಲೇ ಸ್ಪಷ್ಟನೆ ನೀಡಿ, ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲದೇ ಸುಚಿತ್ರಾ ಪತಿ ಕಾರ್ತಿಕ್, ‘ನನ್ನ ಪತ್ನಿ ಭಾವೋದ್ವೇಗಕ್ಕೆ ಒಳಗಾಗಿದ್ದು, ಈ ಟ್ವೀಟನ್ನ ಗಂಭಿರವಾಗಿ ಪರಿಗಣಿಸುವ ಅಗತ್ಯವಿಲ್ಲ,’ ಎಂದೂ ಹೇಳಿದ್ದಾರೆ.

ಒಟ್ಟಿನಲ್ಲಿ ಸುಚಿತ್ರಾ ಅವರ ಒಂದು ಟ್ವೀಟ್ ಇದೀಗ ಮುಗಿದ ಅಧ್ಯಾಯವಾಗಿದ್ದರೂ, ಸುಚಿ ಲೀಕ್ಸ್ ಹೆಸರಲ್ಲಿ ಬಹಿರಂಗಗೊಳ್ಳುತ್ತಿರುವ ನಟ, ನಟಿಯರ ಅಶ್ಲೀಲ ವೀಡಿಯೋ ಭಾರತೀಯ ಚಿತ್ರರಂಗದಲ್ಲಿಯೇ ಸಂಚಲನ ಮೂಡಿಸುತ್ತಿದ್ದು, ಮುಂದಿನ ವೀಡಿಯೋ ಯಾವ ನಟಿಯದ್ದು, ಎಂದು ಪಡ್ಡೆ ಹುಡುಗರು ಕುತೂಹಲದಿಂದ ಕಾಯುವಂತೆ ಮಾಡುತ್ತಿದೆ.