ಮಡಿಕೇರಿ :ಮಡಿಕೇರಿ ತಾಲೂಕಿನ ಪೆರೂರಿನ ಇಗ್ಗುತ್ತಪ್ಪ ಬೆಟ್ಟದಲ್ಲಿ ನಿಗೂಢ ಶಬ್ದ ಕೇಳಿ ಬರುತ್ತಿದ್ದು, ನಾಗರಿಕರು ಆತಂಕಕ್ಕೆ ಒಳಗಗಾಗಿದ್ದಾರೆ.
ಸೋಮವಾರ ರಾತ್ರಿಯಿಂದ ಭೂಮಿಯ ಒಳಭಾಗದಿಂದ ನದಿಯಲ್ಲಿ ನೀರು ಹರಿಯುತ್ತಿರುವ ಸದ್ದು ಕೇಳಿ ಬರುತ್ತಿದ್ದು ಜಲಸ್ಫೋಟ ಆಗಬಹುದು ಎಂಬ ಆತಂಕ ಇಲ್ಲಿನ ಜನರಲ್ಲಿ ಮನೆ ಮಾಡಿದೆ.
ಕಳೆದ ಹಲವು ದಿನಗಳಿಂದಲೂ ಈ ವಿಚಿತ್ರ ಶಬ್ದ ಕೇಳಿ ಬರುತ್ತಿದ್ದು, ಮೂರು ದಿನಗಳಿಂದ ಮತ್ತಷ್ಟುಜೋರಾಗಿದೆ
ಅಯ್ಯಂಗೇರಿಯಲ್ಲೂ ವಾರದ ಹಿಂದೆಯಷ್ಟೇ ನಿಗೂಢ ಕೇಳಿ ಬಂದಿತ್ತು. ಕಳೆದ ರ‍್ಷ ಮಡಿಕೇರಿ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಭೂಕುಸಿತಕ್ಕೂ ಮೊದಲು ಇದೇ ರೀತಿಯ ಶಬ್ದ ಕೇಳಿ ಬಂದಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ