Tuesday, January 21, 2025
ಸಿನಿಮಾ

ಗ್ಲಾಮರಸ್ ಆಗಿ ಕಾಣಿಸಿಕೊಂಡ ಅನಿತಾ ಭಟ್-ಕಹಳೆ ನ್ಯೂಸ್

ಅನಿತಾ ಭಟ್ ಇತ್ತೀಚೆಗೆ ಯೋಗ ಮಾಡಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದರು. ಅಷ್ಟೇ ಅಲ್ಲದೆ ಈಗ ‘ಬೆಂಗಳೂರು 69’ ಸಿನಿಮಾ ಕೂಡ ಮಾಡುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಮುಗಿದಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳೂ ಕೂಡ ಮುಗಿದಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹಲವು ತಿಂಗಳ ಹಿಂದೆಯೇ ಈ ಸಿನಿಮಾ ಸೆಟ್ಟೇರಿದ್ದರೂ ಕೂಡ ಇದರ ಬಗ್ಗೆ ಸ್ವಲ್ಪವೂ ಅಪ್‌ಡೇಟ್ಸ್ ಸಿಕ್ಕಿರಲಿಲ್ಲ. ಇತ್ತೀಚೆಗಷ್ಟೇ ಈ ಚಿತ್ರದ ಪೋಸ್ಟರ್ ಮತ್ತು ಟೈಟಲ್ ಬಿಡುಗಡೆ ಮಾಡಲಾಗಿತ್ತು. ಈ ಚಿತ್ರದಲ್ಲಿ ಅನಿತಾ ಭಟ್ ಜೊತೆಗೆ ಪವನ್ ಶೆಟ್ಟಿ ಕೂಡ ನಟಿಸುತ್ತಿದ್ದಾರೆ. ಅನಿತಾ ಭಟ್ ಈ ಚಿತ್ರದಲ್ಲಿ ಸಿಕ್ಕಾಪಟ್ಟೆ ಗ್ಲಾಮರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕ್ರಾಂತಿ ಚೈತನ್ಯ ಈ ಚಿತ್ರದ ನರ‍್ದೇಶಕ, ಇದು ಇವರ ಮೊದಲ ನರ‍್ದೇಶನದ ಚಿತ್ರ.
ತಮ್ನ ದೇಹ ಸೌಂರ‍್ಯದ ರಹಸ್ಯವನ್ನು ಬಹಿರಂಗಪಡಿಸಿದ ನಟಿ ಅನಿತಾ ಭಟ್‌!!

ಜಾಹೀರಾತು
ಜಾಹೀರಾತು
ಜಾಹೀರಾತು

ಒಂದು ಹಾಡಿನಲ್ಲಿ ಮಾತ್ರ ಅನಿತಾ ಭಟ್ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ, ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ಕಬಿನಿಯಲ್ಲಿ ಈ ಹಾಡಿನ ಚಿತ್ರೀಕರಣ ನಡೆದಿದೆ. ಸಿನಿಮಾದಲ್ಲಿ ಈ ಹಾಡು ಯಾಕೆ ಅನ್ನೋದು ಸಿನಿಮಾ ನೋಡಿಯೇ ತಿಳಿದುಕೊಳ್ಳಬೇಕಂತೆ. ಅನಿತಾ ಭಟ್ ಸ್ವಿಮ್ಮಿಂಗ್ ಡ್ರೆಸ್‌ ಹಾಕಿಕೊಂಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಶ್ರೀಮಂತ ಹುಡುಗಿಯೊಬ್ಬಳನ್ನು ಇಬ್ಬರು ಹುಡುಗರು ಕಿಡ್ನ್ಯಾಪ್ ಮಾಡುತ್ತಾರೆ, ಮುಂದೇನಾಗುತ್ತದೆ? ಮುಂತಾದ ಪ್ರಶ್ನೆಗಳಿಗೆ ಈ ಸಿನಿಮಾ ಉತ್ತರ ನೀಡುತ್ತದೆ. ಕಿಡ್ನ್ಯಾಪ್ ಆದ ಹುಡುಗಿ ಪಾತ್ರದಲ್ಲಿ ಅನಿತಾ ಭಟ್ ಕಾಣಿಸಿಕೊಳ್ಳಲಿದ್ದಾರೆ.