Tuesday, January 21, 2025
ಸಿನಿಮಾ

ಮುಂದಿನ ಚಿತ್ರದಲ್ಲಿ ಕಾಲೇಜ್ ಸ್ಟೂಡೆಂಟ್‌ ಆದ ರಚಿತಾ ರಾಮ್‌-ಕಹಳೆ ನ್ಯೂಸ್

ನಟಿ ರಚಿತಾ ರಾಮ್‌ ನಾಯಕಿಯಾಗಿ ಅಭಿನಯದ ೪ ಸಿನಿಮಾಗಳು ಈ ರ‍್ಷ ತೆರೆಕಂಡಿವೆ. ಅಲ್ಲದೆ, ಎರಡು ಸಿನಿಮಾಗಳಲ್ಲಿ ಅವರು ಅತಿಥಿ ಪಾತ್ರವನ್ನೂ ಮಾಡಿದ್ದಾರೆ. ಇದೀಗ ಇದೇ ಮೊದಲ ಬಾರಿಗೆ ಸ್ಯಾಂಡಲ್‌ವುಡ್‌ನ ಖ್ಯಾತ ನಟರೊಬ್ಬರ ಜತೆ ಅವರು ತೆರೆಹಂಚಿಕೊಳ್ಳಲಿದ್ದಾರೆ ಎಂಬ ಮಾಹಿತಿ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಟಿ ರಚಿತಾ ರಾಮ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ರ‍್ಷ ಅವರ ನಟನೆಯ ‘ಸೀತಾರಾಮ ಕಲ್ಯಾಣ’, ‘ನಟಸರ‍್ವಭೌಮ’, ‘ರುಸ್ತುಂ’, ‘ಐ ಲವ್ ಯು’ ಹಾಗೂ ಅತಿಥಿ ಪಾತ್ರ ಮಾಡಿರುವ ‘ಅಮರ್’, ‘ಭರಾಟೆ’ ಸಿನಿಮಾಗಳು ತೆರೆಕಂಡಿವೆ. ಇದರೊಂದಿಗೆ ಶಿವ ರಾಜ್‌ಕುಮಾರ್ ಜತೆಗೆ ನಟಿಸಿರುವ ‘ಆಯುಷ್ಮಾನ್‌ಭವ’ ಚಿತ್ರವು ತೆರೆಗೆ ಸಿದ್ಧವಾಗಿದೆ. ಇದೀಗ ಅವರು ಹೊಸದೊಂದು ಸಿನಿಮಾ ಒಪ್ಪಿಕೊಂಡಿದ್ದಾರಂತೆ. ವಿಶೇಷವೆಂದರೆ, ಆ ಚಿತ್ರದಲ್ಲಿ ಅವರಿಗೆ ಕಾಲೇಜು ವಿದ್ಯರ‍್ಥಿನಿ ಪಾತ್ರವಂತೆ. ಇನ್ನು ಆದರಲ್ಲಿ ಹೀರೋ ಆಗಿ ಸ್ಯಾಂಡಲ್‌ವುಡ್‌ನ ಖ್ಯಾತ ನಟ ಕಾಣಿಸಿಕೊಳ್ಳಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹೌದು, ಇದೇ ಮೊದಲ ಬಾರಿಗೆ ನಟ ಪ್ರಜ್ವಲ್‌ ದೇವರಾಜ್‌ ಜೋಡಿಯಾಗಿ ರಚಿತಾ ಕಾಣಿಸಿಕೊಳ್ಳಲಿದ್ದಾರಂತೆ. ಶೀಘ್ರದಲ್ಲೇ ಶೂಟಿಂಗ್ ಶುರುವಾಗಲಿರುವ ‘ವೀರಂ’ ಚಿತ್ರದಲ್ಲಿ ಅವರು ಪ್ರಜ್ವಲ್‌ ಜತೆ ನಟಿಸಲಿದ್ದಾರೆ ಎನ್ನಲಾಗಿದೆ. ‘ಈ ಹಿಂದೆ ಕೆಲ ಸಿನಿಮಾಗಳಲ್ಲಿ ರಚಿತಾ ಅವರು ಕಾಲೇಜು ಹುಡುಗಿಯ ಪಾತ್ರ ಮಾಡಿದ್ದಾರೆ. ಅಲ್ಲದೆ, ಬೇರೆ ಬೇರೆ ರೀತಿಯ ಪಾತ್ರಗಳಲ್ಲೂಕಾಣಿಸಿಕೊಂಡಿದ್ದಾರೆ. ಅವೆಲ್ಲವುಗಳಿಗಿಂತಲೂ ಈ ಸಿನಿಮಾದ ಪಾತ್ರ ವಿಭಿನ್ನವಾಗಿದೆ. ಅವರನ್ನು ಹೊಸ ರೀತಿಯಲ್ಲಿ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ’ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ.

‘ಖದರ್‌’ ಕುಮಾರ್‌ ನರ‍್ದೇಶನದಲ್ಲಿಈ ಸಿನಿಮಾ ಮೂಡಿ ಬರಲಿದ್ದು, ‘ಡಾಟರ್ ಆಫ್‌ ಪರ‍್ವತಮ್ಮ’ ಖ್ಯಾತಿಯ ಶಶಿಧರ್ ಇದರ ನರ‍್ಮಾಣದ ಹೊಣೆ ಹೊತ್ತಿದ್ದಾರೆ. ‘ವೀರಂ’ ಚಿತ್ರದ ಫಸ್ಟ್‌ಲುಕ್‌ ಹೊರಬಂದಿದ್ದು, ‘ಡಿ ಬಾಸ್’ ರ‍್ಶನ್‌ ಅವರು ಅದನ್ನು ರಿಲೀಸ್‌ ಮಾಡಿದ್ದರು. ಸದ್ಯ ಪ್ರಜ್ವಲ್‌ ದೇವರಾಜ್‌ ನಟನೆಯ ‘ಇನ್ಸ್‌ಪೆಕ್ಟರ್ ವಿಕ್ರಂ’, ‘ಜೆಂಟಲ್‌ಮನ್‌’, ‘ರ‍್ಜುನ್ ಗೌಡ’ ಚಿತ್ರಗಳ ಕೆಲಸಗಳು ಚಾಲ್ತಿಯಲ್ಲಿವೆ. ಅವೆಲ್ಲ ಮುಗಿಯುತ್ತಿದ್ದಂತೆಯೇ ‘ವೀರಂ’ ಸಿನಿಮಾದ ಶೂಟಿಂಗ್‌ ಶುರುವಾಗಲಿದೆಯಂತೆ. ಇನ್ನು, ರಚಿತಾ ರಾಮ್‌ ಅಂತೂ ಒಂದಾದ ಮೇಲೊಂದು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಲೇ ಇದ್ಧಾರೆ. ಅವರ ನಟನೆಯ ‘ಏಕ್‌ ಲವ್ ಯಾ’, ‘೧೦೦’ ಚಿತ್ರಗಳ ಶೂಟಿಂಗ್ ಬಿರುಸಿನಿಂದ ಸಾಗಿದೆ. ಜತೆಗೆ ಧನಂಜಯ ಜತೆ ‘ಡಾಲಿ’, ಚಿರಂಜೀವಿ ರ‍್ಜಾ ಜತೆ ‘ಏಪ್ರಿಲ್‌’, ವಸಿಷ್ಟ ಸಿಂಹ ಅವರ ಜತೆ ‘ಪಂಥ’ ಸಿನಿಮಾಗಳಲ್ಲಿ ಅವರು ನಟಿಸಲಿದ್ದಾರೆ ಎಂಬ ಮಾಹಿತಿ ಇದೆ.