Sunday, November 17, 2024
ಸುದ್ದಿ

ಫೆ.3 ರಿಂದ 5ರ ವರೆಗೆ ಮೂರುದಿನದ ಪುತ್ತೂರಿನಲ್ಲಿ ಕಲೋಪಾಸನಾ ಕಲಾ ಸಂಭ್ರಮ – ಕಹಳೆ ನ್ಯೂಸ್

 

ಪುತ್ತೂರು :  ನಗರದ ಪರ್ಲಡ್ಕದಲ್ಲಿರುವ ಎಸ್‌ಡಿಪಿ ರೆಮಿಡೀಸ್ ಮತ್ತು ರಿಸರ್ಚ್ ಸೆಂಟರ್‌ನ ಸಾಂಸ್ಕೃತಿಕ ಕಲಾ ಸಂಭ್ರಮ ಕಲೋಪಾಸನಾ-2018 14ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ . ಈ ಬಾರಿ ಫೆ.3,4 ಮತ್ತು 5ರಂದು ಮೂರು ದಿನಗಳ ಕಾಲ ಕರ್ನಾಟಕ ಶಾಸ್ತ್ರೀಯ ಸಂಗೀತ, ಭರತನಾಟ್ಯ ಮತ್ತು ಯಕ್ಷಗಾನ ಪ್ರದರ್ಶನದೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ ಎಂದು ಎಸ್‌ಡಿಪಿ ರೆಮಿಡೀಸ್ ಮತ್ತು ರಿಸರ್ಚ್ ಸೆಂಟರ್‌ನ ನಿರ್ದೇಶಕ ಡಾ. ಹರಿಕೃಷ್ಣ ಪಾಣಾಜೆ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ. 3ರಂದು ಸಂಜೆ 6ಕ್ಕೆ ಖ್ಯಾತ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಕಲೋಪಾಸನಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಉದ್ಘಾಟನಾ ಸಮಾರಂಭದ ಬಳಿಕ ವಿದ್ವಾನ್ ಅಭಿಷೇಕ್ ರಘುರಾಮ್ ಚೆನ್ನೈ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ನಡೆಯಲಿದೆ. ವಯಲಿನ್‌ನಲ್ಲಿ ವಿದ್ವಾನ್ ವಿಠಲ್ ರಂಗನ್ ಬೆಂಗಳೂರು, ಮೃದಂಗದಲ್ಲಿ ವಿದ್ವಾನ್ ಕೆ.ಬಿ. ಜಯಚಂದ್ರ ರಾವ್ ಬೆಂಗಳೂರು, ಖಂಜೀರದಲ್ಲಿ ವಿದ್ವಾನ್ ಗುರುಪ್ರಸನ್ನ ಬೆಂಗಳೂರು ಸಹಕರಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಫೆ. 4 ಸಂಜೆ 7ಕ್ಕೆ ವಿದುಷಿ ರೇವತಿ ನರಸಿಂಹನ್ ಬೆಂಗಳೂರು ಇವರ ನಿರ್ದೇಶನದ ಭರತನಾಟ್ಯ ಸರ್ವಂ ಕೃಷ್ಣಮಯಂ ಮತ್ತು ಭಾವಯಾಮಿ ರಘುರಾಮ ಕಾರ್ಯಕ್ರಮ ನಡೆಯಲಿದೆ. ಫೆ. 5 ಸಂಜೆ 7ಕ್ಕೆ ಶ್ರೀ ಗುರುಪ್ರಸಾದಿತ ಯಕ್ಷಗಾನ ಮಂಡಳಿ ಸಾಲಿಗ್ರಾಮ ಇವರಿಂದ ಭೀಷ್ಮ ವಿಜಯ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ವಿವರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಎಸ್‌ಡಿಪಿ ರೆಮಿಡೀಸ್ ಮತ್ತು ರಿಸರ್ಚ್ ಸೆಂಟರ್ ಕಳೆದ 20 ವರ್ಷಗಳಿಂದ 200ಕ್ಕೂ ಹೆಚ್ಚು ವಿವಿಧ ಆಯುರ್ವೇದ ತಯಾರಿಕೆಗಳನ್ನು ಸಿದ್ಧಪಡಿಸಿ ದೇಶದಾದ್ಯಂತ ವಿತರಿಸುತ್ತಿದೆ. ಈ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಕಲೋಪಾಸನಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ ಎಂದರು.
ಸುದ್ದಿಗೋಷ್ಠಿಯಲ್ಲಿ ರೂಪಲೇಖ, ವಿದ್ವಾನ್ ಕಾಂಚನ ಈಶ್ವರ ಭಟ್ ಉಪಸ್ಥಿತರಿದ್ದರು.

ವರದಿ : ಕಹಳೆ ನ್ಯೂಸ್

Leave a Response