Wednesday, January 22, 2025
ಸುದ್ದಿ

ಉಷಾ ಅವರ ಸಾವಿನ ಕುರಿತು ಸರಿಯಾದ ತನಿಖೆಯಾಗಬೇಕು ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಬೇಕು: ಬೋಜ ನಾರಾಯಣ ಕುಲಾಲ್-ಕಹಳೆ ನ್ಯೂಸ್

ಬಂಟ್ವಾಳ: ಉಷಾ ಅವರ ಸಾವಿನ ಕುರಿತು ಸರಿಯಾದ ತನಿಖೆಯಾಗಬೇಕು ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಮಾಣಿ ಕುಲಾಲ ಸಂಘದ ಅಧ್ಯಕ್ಷ ಬೋಜ ನಾರಾಯಣ ಕುಲಾಲ್ ಮತ್ತು ಯುವ ವೇದಿಕೆ ಪೆರಾಜೆ ಅಧ್ಯಕ್ಷ ನಿತಿನ್ ಪೂಜಾರಿ ಅರ್ಭಿ ಸರಕಾರವನ್ನು ಒತ್ತಾಯಿಸಿದ್ದಾರೆ.


ಅಜೆಕಲ ನಿವಾಸಿ ಉದಯ ಕುಲಾಲ್ ಅವರ ಪತ್ನಿ ಉಷಾ ಅವರು ನ.೨ ರಂದು ಶನಿವಾರ ಬೆಳಿಗ್ಗೆ ಬಿ.ಸಿ.ರೋಡಿನ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಹೆರಿಗೆಗೆಂದು ದಾಖಲಾಗಿದ್ದರು. ಸಂಜೆಯ ವೇಳೆ ಉಷಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಹೆರಿಗೆಯ ಬಳಿಕ ಉಷಾ ಅವರಿಗೆ ತುರ್ತು ಚಿಕಿತ್ಸೆಯ ಅಗತ್ಯವಿದೆ ಎಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲು ವೈದ್ಯರು ಸೂಚಿಸಿದ್ದರು. ಅದರೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷಿಸಿ ಬಳಿಕ ಇವರು ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಉಷಾ ಅವರ ಸಾವಿಗೆ ಆಸ್ಪತ್ರೆಯ ಸಿಬ್ಬಂದಿಗಳ ನಿರ್ಲಕ್ಷವೇ ಕಾರಣ ಎಂಬ ಅನುಮಾನ ಮೂಡಿದ್ದು ಈ ಘಟನೆಯನ್ನು ಮಾಣಿ ಕುಲಾಲ ಸಂಘ ಮತ್ತು ಯುವ ವೇದಿಕೆ ಪೆರಾಜೆ ತೀವ್ರವಾಗಿ ಖಂಡಿಸಿ, ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿದ್ದಾರೆ.