ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಡೆಪ್ಯುಟಿ ಕಮಾಡೆಂಟ್ ರಮೇಶ್ ರವರಿಗೆ ರಾಷ್ಟ್ರಪತಿಗಳ ವಿಶಿಷ್ಟ ಸೇವಾಪದಕ-ಕಹಳೆ ನ್ಯೂಸ್
ಮಂಗಳೂರು:- ದಕ್ಷಿಣ ಕನ್ನಡ ಜಿಲ್ಲೆಯ ಗೃಹರಕ್ಷಕದಳದ ಹಾಗೂ ಹೆಚ್ಚುವರಿ ನಿಯೋಜನೆ, ಉಡುಪಿ ಜಿಲ್ಲಾ ಗೃಹರಕ್ಷಕದಳದ ಡೆಪ್ಯುಟಿ ಕಮಾಡೆಂಟ್ ರಮೇಶ್ ಇವರಿಗೆ, ಗೃಹರಕ್ಷಕದಳ ಮತ್ತು ಪೌರರಕ್ಷಣಾ ಇಲಾಖೆಯಲ್ಲಿನ ವಿಶಿಷ್ಟ ಸೇವೆಯನ್ನು, ಗುರುತಿಸಿ ೨೦೧೭-೧೮ ಸಾಲಿನ ರಾಷ್ಟ್ರಪತಿಗಳ ವಿಶಿಷ್ಟ ಸೇವಾಪದಕವನ್ನು ದಿನಾಂಕ ೮-೧೧-೧೯ರಂದು ಬೆಳಿಗ್ಗೆ ೮:೦೦ಗಂಟೆಗೆ ಕರ್ನಾಟಕ ರಾಜ್ಯದ ಘನವೇತ್ತ ರಾಜ್ಯಪಾಲ ವಜುಭಾಯಿವಾಲ ಇವರಿಂದ ಸ್ವೀಕರಿಸಲಿದ್ದಾರೆ.
೨೦೦೮ರಲ್ಲಿ ರಾಷ್ಟ್ರಪತಿಗಳ ಶ್ಲಾಘನೀಯ ಪದಕ ೨೦೦೮ರಲ್ಲಿ ಮುಖ್ಯಮಂತ್ರಿಗಳ ಪದಕವನ್ನು ಪಡೆದಿರುತ್ತಾರೆ.
ಇವರ ಸೇವೆಯನ್ನು ಗುರುತಿಸಿ ಯುವವಾಹಿನಿ ಮಂಗಳೂರು ೨೦೧೪ರಲ್ಲಿ ಯುವವಾಹಿನಿ ಸಾಧನ ಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಿದೆ.