ನೆಲ್ಯಾಡಿ: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ೭೫ರ ನೆಲ್ಯಾಡಿಯಲ್ಲಿ ವಿದ್ಯಾನಗರಿಯಾಗಿ ಶೋಭಿಸುತ್ತಿರುವ ಸುಂದರ ತಾಣವೇ ಬೆಥನಿ ವಿದ್ಯಾಸಂಸ್ಥೆಗಳು.
ಕಳೆದ ೨೪ ವರ್ಷಗಳಿಂದ ಇಲ್ಲಿ ಬೆಥನಿ ಐಟಿಐ ಕಾರ್ಯಾಚರಿಸುತ್ತಿದ್ದು ವಿವಿಧ ವೃತ್ತಿಗಳಲ್ಲಿ ನುರಿತ ತರಬೇತುದಾರರಿಂದ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದು ಅದೆಷ್ಟೋ ವಿದ್ಯಾರ್ಥಿಗಳ ಜೀವನವನ್ನು ಹಸನಾಗಿಸಿದೆ.
ತಾಂತ್ರಿಕ ಕ್ಷೇತ್ರದಲ್ಲಿ ಶರವೇಗದಲ್ಲಿ ಮುಂದುವರಿ ಯುತ್ತಿರುವ ಜಗತ್ತಿನ ರಾಷ್ಟ್ರಗಳ ಜೊತೆ ಭಾರತವೂ ಗುರುತ್ತಿಸಲ್ಪಡುತ್ತಿರುವುದು ಬಹಳ ಸಂತಸದ ವಿಷಯ.
ಇಲ್ಲಿ ತರಬೇತಿ ಹೊಂದಿರುವ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದು ಹಲವರು ತಮ್ಮ ತಮ್ಮ ಪರಿಸರದಲ್ಲೇ ಸ್ವ ಉದ್ಯೋಗವನ್ನು ಕಂಡುಕೊ0ಡಿರುತ್ತಾರೆ.
ಇದೀಗ ನೆಲ್ಯಾಡಿ ಸುತ್ತಮುತ್ತಲಿನ ಪ್ರೌಢ ಶಾಲೆಗಳು ನಮ್ಮ ಪೋಷಕ ಸಂಸ್ಥೆಗಳಾಗಿದ್ದು ಅವರೊಂದಿಗೆ ಸಂಬ0ಧ ವೃದ್ಧಿಸುವ ನಿಟ್ಟಿನಲ್ಲಿ ಇದೇ ಬರುವ ೭ನೇ ತಾರೀಖಿನಂದು ನೆಲ್ಯಾಡಿ ಬೆಥನಿ ಕ್ರೀಡಾಂಗಣದಲ್ಲಿ ಪ್ರೌಢ ಶಾಲಾ ಮಟ್ಟದ ಕ್ರಿಕೆಟ್ ಪಂದ್ಯಾಟವನ್ನು ಬೆಥನಿ ಐಟಿಐ ಮತ್ತು ಜ್ಞಾನೋದಯ ಬೆಥನಿ ಪಿಯು ಕಾಲೇಜು ಇವುಗಳ ಜಂಟಿ ಆಶ್ರಯದಲ್ಲಿ ನಡೆಸಲು ನಿರ್ಧರಸಲಾಗಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪುತ್ತೂರು ತಾಲೂಕು ಶಾರೀರಿಕ ಶಿಕ್ಷಣಾಧಿಕಾರಿಗಳಾದ ಸುಂದರ ಗೌಡ, ನೆಲ್ಯಾಡಿ ಗ್ರಾ.ಪಂ. ಅಧ್ಯಕ್ಷರಾದ ಗಂಗಾಧರ ಶೆಟ್ಟಿ ಹೊಸಮನೆ, ಪುತ್ತೂರು ತಾಲೂಕು ಯುವ ಸಬಲೀಕರಣ ಹಾಗೂ ಉಪ ಕ್ರೀಡಾಧಿಕಾರಿಗಳಾದ ಮಾಮಚ್ಚನ್ ಎಂ., ಬೆಥನಿ ಸಂಸ್ಥೆಗಳು ನೆಲ್ಯಾಡಿ ಇದರ ಸಂಚಾಲಕರಾದ ರೆ|ಫಾ| ಡಾ| ವರ್ಗೀಸ್ ಕೈಪನಡುಕ್ಕ ಒಐಸಿ, ಜ್ಞಾನೋದಯ ಬೆಥನಿ ಪಿಯು ಕಾಲೇಜು ಪ್ರಾಂಶುಪಾಲರಾದ ರೆ|ಫಾ| ಮ್ಯಾಥ್ಯೂ ಪ್ರಫುಲ್ ಒಐಸಿ, ಬೆಥನಿ ಸಂಸ್ಥೆಗಳು ನೆಲ್ಯಾಡಿ ಇದರ ಬರ್ಸರ್ ರೆ|ಫಾ| ಐಸಕ್ ಸ್ಯಾಮುವೇಲ್ ಒಐಸಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಎಲ್ಲರಿಗೂ ಸ್ವಾಗತ.