ಮುಂದಿನ ವರ್ಷ ನಡೆಯಲಿರುವ ಐಸಿಸಿ ಟಿ 20 ವಿಶ್ವಕಪ್ 2020 ರ ಪೂರ್ಣ ವೇಳಾಪಟ್ಟಿ ಬಿಡುಗಡೆಯಾಗಿದೆ. ಟಿ-20 ವಿಶ್ವಕಪ್ ಅಕ್ಟೋಬರ್ 18 ರಿಂದ ಪ್ರಾರಂಭವಾಗಲಿದೆ. ಫೈನಲ್ ನವೆಂಬರ್ 15 ರಂದು ನಡೆಯಲಿದೆ. ಟಿ-20 ವಿಶ್ವಕಪ್ ಪಂದ್ಯ ಇದೇ ಮೊದಲ ಬಾರಿ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿದೆ.
ಈ ಪಂದ್ಯಾವಳಿಯ ವೇಳಾಪಟ್ಟಿಯನ್ನು ಐಸಿಸಿ ಈಗಾಗಲೇ ಬಿಡುಗಡೆ ಮಾಡಿತ್ತು. ಆದರೆ ಅದರಲ್ಲಿ ಆಡುವ ಅಂತಿಮ ತಂಡಗಳ ಹೆಸರು ಈಗ ಬಹಿರಂಗವಾಗಿದೆ. ಐಸಿಸಿ ಟಿ 20 ವಿಶ್ವಕಪ್ ಅರ್ಹತಾ ಪಂದ್ಯಾವಳಿ ಮುಗಿದ ತಕ್ಷಣ ಅಂತಿಮ ಪಟ್ಟಿ ಹೊರಬಿದ್ದಿದೆ. ವಿಶ್ವಕಪ್ ನಲ್ಲಿ ಒಟ್ಟು 16 ತಂಡಗಳು ಆಡಲಿವೆ.
ನೆದರ್ಲ್ಯಾಂಡ್ಸ್, ಪಪುವಾ ನ್ಯೂಗಿನಿಯಾ, ಓಮನ್, ಸ್ಕಾಟ್ಲೆಂಡ್, ನಮೀಬಿಯಾ ಮತ್ತು ಐರ್ಲೆಂಡ್ ಸೇರಿವೆ. ಈ ತಂಡಗಳು ಅರ್ಹತಾ ಪಂದ್ಯಾವಳಿಯ ಮೂಲಕ ವಿಶ್ವಕಪ್ ಗೆ ಎಂಟ್ರಿ ಪಡೆದಿವೆ. ಪಂದ್ಯಾವಳಿಯಲ್ಲಿ ಒಟ್ಟು 45 ಪಂದ್ಯಗಳು ನಡೆಯಲಿವೆ. ಮೊದಲ ಸುತ್ತಿನಲ್ಲಿ ಎಂಟು ತಂಡಗಳಿವೆ. ಇವುಗಳಲ್ಲಿ ಶ್ರೀಲಂಕಾ, ಬಾಂಗ್ಲಾದೇಶ, ನೆದರ್ಲ್ಯಾಂಡ್ಸ್, ಪಪುವಾ ನ್ಯೂಗಿನಿಯಾ, ಓಮನ್, ಸ್ಕಾಟ್ಲೆಂಡ್, ನಮೀಬಿಯಾ ಮತ್ತು ಐರ್ಲೆಂಡ್ ಸೇರಿವೆ. ಮೊದಲ ಸುತ್ತಿನ ಎಂಟು ತಂಡಗಳಲ್ಲಿ ನಾಲ್ಕು ತಂಡಗಳು ಸೂಪರ್ -12 ಗೆ ಅರ್ಹತೆ ಪಡೆಯಲಿವೆ. ಈಗಾಗಲೇ ಸೂಪರ್ -12ಕ್ಕೆ ನೇರವಾಗಿ ಅರ್ಹತೆ ಪಡೆದ ತಂಡಗಳ ಜೊತೆ ಈ ತಂಡಗಳು ಸೆಣೆಸಲಿವೆ.