Monday, January 20, 2025
ಸುದ್ದಿ

ಪಠ್ಯಕ್ರಮ’ದಿಂದ ‘ಟಿಪ್ಪು ಇತಿಹಾಸ’ ಕೈಬಿಡುವ ವಿಚಾರ: ನಾಳೆ ‘ಪಠ್ಯ ಪುಸ್ತಕ ಪರಿಶೀಲನಾ ಸಮಿತಿ’ ಸಭೆ-ಕಹಳೆ ನ್ಯೂಸ್

ಬೆಂಗಳೂರು : ಇತಿಹಾಸದಿಂದ ಟಿಪ್ಪು ಸುಲ್ತಾನ್ ವಿಚಾರವನ್ನು ಪಠ್ಯದಿಂದ ಕೈಬಿಡುವ ವಿಚಾರವಾಗಿ ಕಳೆದ ಕೆಲ ದಿನಗಳಿಂದ ಭಾರಿ ಸುದ್ದಿಯಾಗುತ್ತಿದೆ.

ಸರ್ಕಾರ ಟಿಪ್ಪು ವಿಚಾರವನ್ನು ಪಠ್ಯದಿಂದ ಕೈಬಿಡಲು ಚಿಂತನೆ ನಡೆಸಿದ್ದರೆ, ಅತ್ತ ಕಾಂಗ್ರೆಸ್ ಹಾಗೂ ಜೆಡಿಎಸ್ ನ ನಾಯಕರು ಟಿಪ್ಪು ಒಬ್ಬ ಸ್ವಾತಂತ್ರ್ಯ ಹೋರಾಟಗಾರ ಎಂತಲೇ ತಮ್ಮ ವಾದವನ್ನು ಮಂಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬೆನ್ನಲ್ಲೇ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ನೇತೃತ್ವದಲ್ಲಿ ನಾಳೆ ಪಠ್ಯ ಪುಸ್ತಕ ಪರಿಶೀಲನಾ ಸಮಿತಿ ಸಭೆ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಭೆಯಲ್ಲಿ ಶಾಲಾ ಪಠ್ಯದಿಂದ ಟಿಪ್ಪು ಇತಿಹಾಸ ತೆಗೆಯುವ ಬಗ್ಗೆ ಚರ್ಚೆ ನಡೆಯಲಿದ್ದು, ಒಮ್ಮೆ ಸಭೆ ಪರಿಶೀಲಿಸಿದ ನಂತರವಷ್ಟೇ ಟಿಪ್ಪು ಪಠ್ಯ ಇರಬೇಕೋ ಬೇಡವೋ ಎಂಬುವುದರ ಬಗ್ಗೆ ಸಭೆಯ ಬಳಿಕ ಸರ್ಕಾರ ತನ್ನ ಅಂತಿಮ ನಿರ್ಧಾರ ಪ್ರಕಟಿಸಲಿದೆ. ಮೈಸೂರು ಹುಲಿ ಎಂದೇ ಕರೆಯಲ್ಪಡುವ ಟಿಪ್ಪು ಸುಲ್ತಾನ್​​ ಜಯಂತಿ ಆಚರಣೆಯನ್ನು ರದ್ದುಗೊಳಿಸಿ ಸಿಎಂ ಬಿ.ಎಸ್​​ ಯಡಿಯೂರಪ್ಪ ಸರ್ಕಾರ ಆದೇಶ ಹೊರಡಿಸಿತ್ತು. ಅಲ್ಲದೇ, ಪಠ್ಯ ಪುಸ್ತಕಗಳಿಂದಲೂ ಟಿಪ್ಪು ಸುಲ್ತಾನ್ ವಿಚಾರವನ್ನು ಕೈಬಿಡುವ ಚಿಂತನೆ ನಡೆಸಲಾಗಿದೆ…